Sunday, January 16, 2011

ಟೋಪಿ ಬೇಕಾ ಟೋಪಿ


ಆಗ ನನಗೆ ಸುಮಾರು ಎರಡು ವರ್ಷ... ಈಗ ನನಗೆ ನೆನಪಿರಿವುದು ತುಣುಕುಗಳು ಮಾತ್ರ, ಅದರಲ್ಲಿ ಒಂದು ಸವಿ ನೆನಪು....

ಎಲ್ಲರ ಹಾಗೆ ನನಗೆ ಅಪ್ಪ ಅಮ್ಮ ಪ್ರೀತಿ ಸಿಗಲಿಲ್ಲ ಆದರೆ ಅದಕ್ಕಿಂತ ಹೆಚ್ಚು ಪ್ರೀತಿ ನನ್ನ ಅಜ್ಜಿ, ಮಾವ ಮತ್ತು ಚಿಕ್ಕಮಂದಿರು ತೋರಿಸುತಿದ್ದರು. ಏಕೆಂದರೆ ನನ್ನ ಮಾವ ನನ್ನ ಚಿಕ್ಕಂದಿನಿಂದಲೂ ಬೆಳೆಸಿದ್ದರು (ಎಳೆಮಗುವಿನಿಂದ) .... ಎಂದಿಗೂ ನನಗೆ ತಂದೆ ತಾಯಿಯ ಪ್ರೀತಿಯ ಕೊರತೆ ಉಂಟಾಗಿಲ್ಲ...

ಆಗ ನಮ್ಮ ಆಂಟಿ ಕೆಲವರು ಹುಡುಗರಿಗೆ tution ಮಾಡ್ತಿದ್ರು.... ಆ ಸಮಯದಲ್ಲಿ ನಾ ತುಂಬಾ ಕಲಿತೆ... ಎಷ್ಟೋ ಬಾರಿ ಅವರಿಗೆ ಬರದ rhymes ನಾನೇ ತೊದಲು ಧ್ವನಿಯಲ್ಲಿ ಹೇಳುತಿದ್ದೆ... ಇದರಿಂದ ಅವರಿಗೆಲ್ಲ ತುಂಬಾ ಖುಶಿ. ನಾನು ಮಾತ್ರ ಏನೋ ಸಾದಿಸಿದವನಂತೆ ಹುಬ್ಬಿ ಹೋಗುತಿದ್ದೆ.... ಆ ಹುಡುಗರ ಜೊತೆಯೇ ನನ್ನ ಆಟ ಮತ್ತು ಪಾಠ ಎರಡು ನಡೆಯುತ್ತಿತ್ತು ... ಅವರಲ್ಲಿ ಇಬ್ಬರು ಶಿಲ್ಪ ಮತ್ತು ಸಿಂಧು (cousin sisters). ಅವರನ್ನು ಕಂಡರೆ ನನಗೆ ತುಂಬಾ ಇಷ್ಟ. ಅವರಿಗೂ ಸಹ ಹಾಗೆಯೆ ಇತ್ತು (ಆಗ ಅವರು ಸುಮಾರು 7 ಮತ್ತು 5 ವರ್ಷದ ಮಕ್ಕಳು).

ಆ ಮುಗ್ದ ಪ್ರೀತಿ ಇಂದಿಗೂ ನನ್ನ ಎದೆಯಾಳದಲ್ಲಿ ನೆನಪಾಗಿ ಉಳಿದಿದೆ.... ಅವರೇ ನನ್ನ ಮೊದಲ ಸ್ನೇಹಿತರು.... ಅವರ ಜೊತೆಗೆ ನನ್ನ ಆಟ ಹಾಗು ಪಾಠ... ನಾ ಮೊದಲು ಆಡಿದ ಆಟದ ಹೆಸರು 'ಟೋಪಿ ಬೇಕಾ ಟೋಪಿ' ..... Tution ಅಲ್ಲಿ ಕರೆಂಟ್ ಹೋದಾಗ ಈ ಆಟ ಆದುತಿದ್ದೆವು .... ಈಗಿನ video game ಸಹ ಆ ಆಟದ ಖುಷಿ ನೀಡಲಾರದು......

ಈ ತರಹ ಆಟಗಳು ಬಹಳಷ್ಟು.... ಕಣ್ಣ ಮುಚ್ಚಾಲೆ , ಚಟ್ ಪಟ್ ಕಲ್ಲಾ ಮಣ್ಣ ಹೀಗೆ ಹಲವು.... ಈ ತರಹ ಆಟಗಳು ಈಗ ತುಂಬಾ ಕಡಿಮೆ....ಇವೆಲ್ಲ ಕಾಲದ ನೆರಳ್ಳಲ್ಲಿ ಮರೆಯಾದರು, ಸವಿ ನೆನಪಂತೆ ಉಳಿದಿದೆ.... ಇಂಟರ್ನೆಟ್, ವೀಡಿಯೊ ಗೇಮ್ಸ್ ಬಂದಾಗಿನಿಂದ ಈಗಿನ ಮಕ್ಕಳು ಅವುಗಳಿಗೆ ಪ್ರಾಮುಕ್ಯತೆ ಹೆಚ್ಚು ನೀಡುತ್ತಾರೆ.... ಮುಂಬರುವ ಪೀಲೆಗೆಗೆ ಬಹುಶ ಈ ಆಟಗಳ ಹೆಸರು ಸಹ ಗೊತ್ತಿರುವುದಿಲ್ಲ....

ಬಹುಷಃ ನಿಮಗೂ ಕೂಡ ಇಂತಹ ನೆನಪುಗಳು ಖುಷಿ ಕೊಡಬಲ್ಲದು.
ನಿಮಗೂ ನೀವಾಡಿದ ಮೊದಲ ಆಟ ನೆನಪಿದೆಯೇ....????

Monday, January 10, 2011

ನೆನಪುಗಳು..




ನೆನಪುಗಳು ಜೀವನದ ಅತಿ ಸುಂದರವಾದ ಪುಟ. ಬಹಳಷ್ಟು ಜನರಿಗೆ ಆ ಪುಟವೇ ಜೀವನ.... ಮರೆತರು ಮರೆಯಲಾಗದ, ಎಲ್ಲೇ ಹೋದರು ಹಿಂದೆ ಬರುವ, ಒಂಟಿತನದಲ್ಲಿ ಜೊತೆಯಾಗುವ ಸ್ನೇಹಜೀವಿ, ಈ ಸವಿ ನೆನಪುಗಳು.... ಅಂತಹ ನೆನಪುಗಳ ಹೂದೋಟವೆ ಈ '' ನೆನಪಿನಂಗಳದಲ್ಲಿ ಇಂದು".....ಕೆಲವರಿಗೆ ಬಾಲ್ಯದ ನೆನಪು, ಕೆಲವರಿಗೆ ಶಾಲೆಯ ದಿನಗಳ ನೆನಪು, ಕೆಲವರಿಗೆ ತವರೂರಿನ ನೆನಪು, ಕೆಲವರಿಗೆ ಸ್ನೇಹಿತರ ನೆನಪು, ಇನ್ನೂ ಕೆಲವರಿಗೆ ಕಳೆದುಕೊಂಡ ಪ್ರೀತಿಯ ನೆನಪು... ಹೀಗೆ ಕಾಲದ ಮಡಿಲಲ್ಲಿ ಅವಿತಿರುವ ನೆನಪುಗಳು ಸಾವಿರ.... ಕೆಲವೊಮ್ಮೆ ಆನಂದದ ಕಣ್ಣೀರು ತರಿಸೋ ನೆನಪು, ಕೆಲವೊಮ್ಮೆ ದುಃಖ ಕೊಡುವ ನೆನಪು.... ಆದರು ಆ ನೆನಪುಗಳು ತರುವ ಆನಂದ, ಅದರಿಂದ ಮೂಡುವ ಭಾವನೆಗಳು ಅತೀತ.....

ಆದರೆ
ಇಂದಿನ ಗಡಿ ಬಿಡಿ ಜೀವನದಲ್ಲಿ ಅವುಗಳಿಗೂ ಸಮಯವಿಲ್ಲದಂತೆ ಆಗಿದೆ... ಈ ಬ್ಲಾಗ್ ಓದುವ ಕೆಲವರಿಗಾದರೂ, ಅವರ ಹಿಂದಿನ ನೆನಪುಗಳನು ಹೆಕ್ಕಿ ತೆಗೆಯುವ ಸಣ್ಣ ಪ್ರಯತ್ನ ಈ ನನ್ನ "ನೆನಪಿನಂಗಳದಲಿ ಇಂದು"......


'Memories' is one of the beautiful page of our lives. Though you want to forget, you can't.  If you runaway from those memories, they still follow you everywhere. And, In loneliness those sweet memories become your best friend. I desccribe this blog as the 'beautiful garden' filled with such beautiful and sweet memories.

Some people remember their childhood days and some remember their school days. Some remember the memories of their hometown and some remember their good old friends. And, there are such people who live their life remembering their lost love and the memories related to that.

There are thousands of such memories which are hidden in the shadow of the time. Sometimes these memories gives tears of happiness and sometimes tears of pain. Whatever it is, but the joy and the mixed feelings these memories bring with them are inevitable and unexplainable.

But, these days everyone is so busy that they don't have time to just think about those sweet days and enjoy. Here I am trying to bring out such memories for the readers of this blog. Hope, whoever reads will be happy remembering their sweeet times of life.