Friday, January 9, 2015

ಕೆಲವು ಸಾರಿ ಆ ದೇವರು ನಾವು ಬಯಸಿದ್ದನ್ನು ಕೊಟ್ಟು ನಮ್ಮ ಹೃದಯಕೆ ಘಾಸಿ ಉಂಟು ಮಾಡುತ್ತಾನೆ. ಅಥವಾ ನಾವು ಬಯಸದಿದ್ದರು ನಡೆಯುವುದೇನೋನಡೆಯುತ್ತದೆ ಎಂದು ಕೂಡ ಹೇಳುತ್ತಾರೆ ಕೆಲವರು. ಏನೋ ಅರಿಯದ ಕಳವಳ ಹಾಗು ಗೊಂದಲ ಮನಸಲಿ. ಹಳೇ ಆಫೀಸಿಗೆ ಹುಮ್ಮನಸಸ್ಸಿನಿಂದ ನನ್ನ ಗೆಳೆಯರನ್ನು ಹಾಗು ಅವಳನ್ನು ನೋಡಲು ಹೊರಟೆ. ಬಂದೊಡನೆಯೇ ನನ್ನ ಕಣ್ಣುಗಳು ಹುಡುಕಿದ್ದೇ ಅವಳನ್ನು. ಎಲ್ಲ ತಿಳಿದಿದ್ದರೂ ದೂರದಿಂದ ನೋಡಿ, ಮೌನದಲೇ ಪ್ರೀತಿಯ ಆಟ ನಡೆದಿತ್ತು. ಎಲ್ಲವು ನನ್ನ ಹಿಡಿತದಲ್ಲೇ ಇದೆ ಅಂತ ಎಂದುಕೊಂಡಿದ್ದೆ, ಆದರೆ ಅದು ಎಷ್ಟು ಮಟ್ಟಿಗೆ ನಿಜ ಎಂದು ಈಗ ತಿಳಿದಿದೆ. ಅವಳನ್ನು ಹುಡುಕಿದ ಕಣ್ಣುಗಳಿಗೆ ಉಂಟಾಗಿದ್ದು ನಿರಾಸೆ. ಆದರು ಅವಳು ಬರುವಳು ಎಂಬ ನಂಬಿಕೆ ನನ್ನನು ಹಾತುರದಿಂದ ಕಾಯುವಂತೆ ಮಾಡಿತ್ತು.  ಅವಳು ಬಂದರೆ, ಎಂದಿನಂತೆ ಅವಳ ಜೊತೆ ತಿಂಡಿ ಮಾಡುವ ತವಕ. ನನಗೆ ತಿಳಿಯದೆಯೇ ಆ ಕ್ಷಣಗಳಿಗೆ ಕಾಯುತಿದ್ದೆ. ಅವಳ ಬರುವಿಕೆಯನ್ನೇ ಕಾಯುತಿದ್ದ ನನಗೆ, ಅವಳು ಬಂದೊಡನೆಯೇ ಮೂಡಿತ್ತು ಸನ್ತಸ. ಅವಳನ್ನು ಕಂಡು ಬಹಳ ದಿವಸವಾದುದ್ದರಿಂದ,  ಅವಳನ್ನು ಕಂಡೊಡನೆಯೇ ಓಡಿಹೋಗಿ ಅಪ್ಪಿಕೂಳುವ ತವಕ. ಆದರೆ ನನ್ನ ಮನಸನ್ನು ಹಿಡಿತದಲ್ಲಿಟ್ಟುಕೊಂಡೆ.    

ಹೌದು, ನನಗೆ ಎಲ್ಲ ತಿಳಿದಿತ್ತು. ನನ್ನ ಅವಳ ಮಧ್ಯೆ ಪ್ರೀತಿಯ ಸಂಬಂಧ ಎಂದಿಗೂ ಸಾಧ್ಯವಾಗಲಾರದು ಎಂದು ತಿಳಿದಿತ್ತು. ಅವಳ ಮನಸಲ್ಲಿ ಮತ್ತೊಬ್ಬರಿಗಾಗಿ ಇದ್ದ ತವಕ ಹಾಗು ಪ್ರೀತಿಯ ಬಗ್ಗೆಯೂ ತಿಳಿದಿತ್ತು. ಇದೆಲ್ಲ ತಿಳಿದೇ, ಅವಳ ಜೊತೆ ಒಂದಾಗುವ ಕನಸಿಗೆ ಕಡಿವಾಣ ಹಾಕಿದ್ದೆ. ಆದರು ಎಲ್ಲಿಯೋ ಒಂದು ಮೂಲೆಯಲ್ಲಿ ನಾ ಅವಳಿಗೆ ಮನಸೋತಿದ್ದೆ. ಇಂದು ತಿಳಿದದ್ದು ಏನೆಂದರೆ, ಅವಳ ಹುಡುಗ ಅವಳಿಗೆ ಪ್ರೊಪೋಸ್ ಮಾಡಿದನಂತೆ ಹಾಗು ಅವಳು ಅವನ ಜೊತೆ ಜೀವನ ಹಂಚಿಕೊಳ್ಳಲು ದೇಶ ಬಿಟ್ಟು ಹೋಗುತ್ತಿರುವಳಂತೆ. ಇದನ್ನು ಕೇಳಿದೊಡನೆಯೇ, ಅವಳ ಕನಸು ನನಸಾಯಿತೆಂದು ಆನಂದ ಪಟ್ಟೆ. ಆದರೆ ಈ ಹುಚ್ಚು ಮನಸಿಗೆ ಅರ್ಥವಾಗದ ವಿಷಯವೆಂದರೆ, ಅವಳು ಅದೇ ಸಮಯದಲ್ಲಿ ನನ್ನಿಂದ ದೂರವಾಗುತ್ತಿರುವಳೆಂದು. ಮೆಲ್ಲಗೆ ಈ ವಿಷಯ ಅರಿತ ಮನಸಿಗೆ, ಎಷ್ಟು ಸಂತೋಷವಿತ್ತೋ ಅಷ್ಟೇ ದು:ಖವು ಮೂಡತೊಡಗಿತು.  ಎಲ್ಲರ ಮುಂದೆ ನಗುವಿನಿಂದ ಅದನ್ನು ಮರೆಮಾಚಿದರು ಮನಸಿನ ಗೊಂದಲಕ್ಕೆ ಕಡಿವಾಣ ಹಾಕಲು ಆಗಲೇ ಇಲ್ಲ. ದಿನವೆಲ್ಲ, ಅವಳು ಹಾದು ಹೋದಲೆಲ್ಲ ಅವಳ ಮೊಗವನ್ನು ನೋಡುವುದೇ ಆಗಿತ್ತು. ಅವಳ ಕನಸು ನಿಜವಾಯಿತೆಂದು ಆನಂದ ಪಡಬೇಕೋ, ಅಥವಾ ನನ್ನ ಈ ಕನಸು ಕನಸಾಗಿಯೇ ಉಳಿಯಿತೆಂದು ಸುಮ್ಮನಿರಬೇಕೋ ಅರಿಯಲಾಗಲಿಲ್ಲ.  ಮೊದಲ ಸಲ ನಾನು ಕೇಳಿಕೊಂಡಿದ್ದು ನೆರವೇರಿರುವುದಕ್ಕೆ,  ಹೃದಯಕೆ ಘಾಸಿ ಉಂಟಾಗಿದೆ. ಆದರು ನನ್ನನ್ನು ನಾನು ಸಮಜಾಯಿಸಿಕೊಳ್ಳುವುದು ಬಿಟ್ಟರೆ ಬೇರೆ ದಾರಿಯಿಲ್ಲ. ಅವಳಿಗೆ ಈ ಜನುಮದಲಿ ನನ್ನ ಭಾವನೆಯ ಸುಳಿವು ಸಿಗುವುದಿಲ್ಲ. ಆದರೆ ಉಸಿರಿರುವವರೆಗೂ ಉಳಿದುಬಿದುವಳು ಕಿರು ನಗೆಯಾಗಿ, ಸವಿ ನೆನಪಾಗಿ.  

ಕೇಳಿದ್ದನ್ನು ಕೊಡದೆಯು ನೀನು
ನೋವಿನ ಶೀರ್ಷಿಕೆಯ ಬರೆದೆ

ಓ ಭಗವಂತ

ಈಗ ಕೇಳಿದ್ದನ್ನು ಕನಿಕರಿಸಿ
ಹೃದಯ ಘಾಸಿ ಮಾಡಿದೆ

ಅರಿಯದೆಯೂ  ಸಿಲುಕಿದೆ
ಅರಿತು ಸಹ ಮತ್ತೆ ಸಿಲುಕಿದೆ

ಇದು ನಿನ್ನ ಆಟವೋ
ಅಥವಾ ವಿಧಿ ವಿಪರ್ಯಾಸವೋ? 

Thursday, January 8, 2015

ಒಂದು ಸಣ್ಣ ಪ್ರೀತಿ ಕಥೆ





ನಾ ಬರೆಯುವ ಈ ಶೀರ್ಷಿಕೆ ಸವಿ ನೆನಪಾಗಿ ಉಳಿಯುವುದೋ ಅಥವಾ ನನಸಾಗಿ ನನ್ನ ಜೀವನವಾಗುವುದೋ ನಾ ತಿಳಿಯೆ. ಆದರು ೧೩ನೆ  September ೨೦೧೪ ರ ಬೆಳ್ಳಂ ಬೆಳ್ಳಿಗೆ ನನ್ನ ನಿದ್ದೆಯನ್ನು ಕೆಡವಿದ ಕನಸಿನ ಹಾಗು ನನ್ನ ಭಾವನೆಯ ಪರಿಚಯ ಇಲ್ಲಿದೆ.

ಈಗ ನಿಮ್ಮೆಲರಿಗೂ ಈ ಪರಿಸ್ಥಿತಿಗೆ ಕಾರಣವಾದ ಸನ್ನಿವೇಶಗಳನ್ನು ಪರಿಚಯ ಮಾಡಿಸಿ ಕೊಡುವೆ. ನಡೆದ ಪ್ರತಿಯೊಂದು ಸಣ್ಣ ಸಂಘಟನೆಯು ಬರೆಯುತ್ತಿರುವೆನು. ಏಕೆಂದರೆ ಈ ಸಣ್ಣ ವಿಷಯಗಳೇ ಮನಕೆ ಘಾಸಿ ಮಾಡುವುದು     

ಇದು ನಡೆದದ್ದು ೨ ದಿವಸಗಳ ಹಿಂದೆ. ಎಂದಿನಂತೆ ಆಫೀಸಿಗೆ ಹೋರಟ ನನಗೆ ಮೊದಲು ಎದುರಾಗಿದ್ದು ಅವಳು. ಅಹುದು, ಪ್ರತಿ ದಿವಸ ಮೊದಲ ದರ್ಶನ ಅವಳದ್ದೇ ಆದರೆ ಎಂದು ಏನು ಅನಿಸಿರಲಿಲ್ಲ. ಗುಡ್ ಮಾರ್ನಿಂಗ್ ಹೇಳಿ, ನನ್ನ ಸೀಟಿನಲ್ಲಿ ಕುಳಿತು ಕೆಲಸ ಆರಂಭಿಸುತ್ತಿದೆ. ಆದರೆ, ಈ ದಿನ ಮಾತ್ರ ಅವಳು ಕಂಡಿದ್ದು ಸುಂದರಿಯಂತೆ. ಅವಳು ಆ ದಿನ ಬಹುಷಃ ಆಫೀಸಿಗೆ ತಡವಾದ್ದರಿಂದ, ಅವಳ ತಲೆಯ ಕೂದಲನ್ನು ಸರಿಯಾಗಿ ಒಣಗಿಸಿರಲ್ಲಿಲ್ಲ. ಆ ತಡವಿದ ಕೂದಲು ಹಾಗು ಅವಳ ಮೇಕ್ಅಪ್ ರಹಿತ ಮುಖವನ್ನು ಕಂಡು ಎದೆಯೊಳಗೆ ಗಂಟೆ ಬಾರಿಸಿದಂತೆ ಭಾಸವಾಯಿತು. ಆ ದಿನವಿಲ್ಲ ನನಗೆ ಅರಿಯದೆಯೇ ನನ್ನ ಕಣ್ಣು ಅವಳನ್ನು ಹುಡುಕತೊಡಗಿತ್ತು. ಅವಳು ಹಾದುಹೊದಾಗಲೆಲ್ಲ ತಿಳಿ ಮಂದಹಾಸದ ಪರಿಚಯಗಳು ನಡೆದಿದ್ದವು. ಅವಳಿಗೆ ತನ್ನ ಕೆಲಸದ ವಿಷಯದಲ್ಲಿ ಸಹಾಯ ಮಾಡುವ ಅಧ್ರುಷ್ಟವು ನನಗೆ ಒಲಿದಿತ್ತು,  ಅಂತೆಯ ಆಫೀಸಿನಲ್ಲಿ ಮರುದಿನ ಒಂದು ಕಾರ್ಯಕ್ರಮ ಆಯೋಜಿಸಲು ಅವಳಿಗೆ ಸಹಾಯ ಮಾಡಿದೆ. ಇದರಿಂದ ಪುಳಕಿತಗೊಂಡ ಅವಳು, ನನ್ನನು ಸಿಹಿಯಾದ ಸಕ್ಕರೆಯೆಂದು ತನ್ನ ಸಕ್ಕರೆಯ ಬಾಯಿಂದ ಅಕ್ಕರೆಯಾಗಿ ನುಡಿದಳು. ಅದ್ದನು ನುಡಿದ ಪರಿ ನನನ್ನು ಆಗಲೇ ಹಳ್ಳಕ್ಕೆ ಬೀಳುವಂತೆ ಮಾಡಿತ್ತು. ಮನೆಗೆ ಹೊರಟ ಸಮಯ, ಕಾರಿನಲ್ಲಿ ಕೂಡ ಅವಳು ನುಡಿದ ಪರಿಯ ನೆನಪಿಸಿಕೊಂಡು ಖುಷಿ ಪಟ್ಟೆ. ಇದಕ್ಕೆ ಸರಿಯಂತೆ ಕಾರಿನಲ್ಲಿ ಹಾಕಿದ್ದ ಪ್ರೀತಿಯ ಹಾಡುಗಳು ನನ್ನನು ಮನಸೂರೆ ಮಾಡಿದ್ದವು. ಮನೆಗೆ ಬಂದು ಯೋಚಿಸಿದ ಮೇಲೆಯೇ ತಿಳಿದದ್ದು, ಜೀವನದ ಗಾಡಿ ಮತ್ತೆ  ಹಳಿತಪ್ಪುತ್ತಿದೆಯೆಂದು. ಕೂಡಲೇ ಏನಾದರು ಮಾಡಿ ಸರಿಯಾದ ಟ್ರ್ಯಾಕ್ ಗೆ ತರಬೇಕೆಂದು, ಮೂಡಿದ ಭಾವನೆ ಕೇವಲ ಆಕರ್ಷನೆಯೆಂದು, ಇದುಪ್ರೀತಿಯಾದರು ಸಹವಾಸ ಬೇಡವೆಂದು ನಿರ್ದರಿಸಿ, ಆ ಯೋಚನೆ ಅಲ್ಲಿಗೆ ಬಿಟ್ಟು ಮೇರಿ ಕೊಂ ಮೂವಿ ನೋಡುತ್ತಾ ಸಂಜೆಯಕಳೆದೆ. ಸುಖ ನಿದಿರೆಯು ಬಂತು. ಮತ್ತೆ ಅದರ ಯೋಚನೆ ಶುರುವಾಗಿದ್ದು ಮರುದಿನ ಬೆಳ್ಳಿಗ್ಗೆ ಅದೇ ಬೆಡಗಿಯನ್ನು ಸೀರೆಯಲ್ಲಿ ಕಂಡಾಗ. ಎಣ್ಣೆಯಿಂದ ಜಾರಿ ತುಪ್ಪಕ್ಕೆ ಬಿದ್ದ ಪರಿಸ್ಥಿತಿ ನನದು.

ಇಂದು ಆಫೀಸಿನಲ್ಲಿ Ethnic Day ಇದುದ್ದರಿಂದ ನಾನು ಸಂಪ್ರದಾಯದಂತೆ ಪಂಚೆಯುಟ್ಟು ಹೊರಟಿದ್ದೆ. ಅವಳು ಸಹ ಹಿಂದಿನ ದಿವಸ ಸೀರೆಯ ಬಗ್ಗೆ ನನ್ನ ಜೊತೆ ಚರ್ಚಿಸಿದ ನೆನಪಾಯ್ತು. ತನ್ನ ಬಳಿ ಕೇವಲ ಕೆಂಪು ಹಾಗು ಕಪ್ಪು ಬಣ್ಣದ ಸೀರೆ ಇದೆಯೆಂದು, ಯಾವುದು ಚೆಂದವೆಂದು ನನ್ನ ಕೇಳಿದ್ದಳು. ನಾನು ಕೆಂಪು ಬಣ್ಣದ ಸೇರಿಯನ್ನು ಉಡಲು ಹೇಳಿದ್ದೆ ಆದರೆ ಅವಳು ಕಪ್ಪು ಬಣ್ಣದ ಸಿರಿಯಲಿ ಬರಬಹುದೆಂದು ಯೋಚಿಸಿದೆ. ಅವಳು ಸೀರಿಯಲ್ಲಿ ಸುಂದರವಾಗಿ ಕಾಣುವಲು ಎಂದು, ಸೀರೆಯ ಮಹತ್ಯದ ಬಗ್ಗೆಯೂ ತುಸು ಹೇಳಿದ್ದ ನೆನಪಾಯ್ತು ನನಗೆ. ಈ ಸಂಭಾಷನೆಯೆಲ್ಲ ನನ್ನ ಕಡೆಯಿಂದ ಕ್ಯಾಶುಯಲ್ ಆಗೇ ನಡೆದಿತ್ತು. ಮುಂಜಾನೆ ಆಫೀಸಿಗೆ ಬಂದಂತೆ ನನ್ನ ಕಣ್ಣು ಮಾತ್ರ ಹುಡುಕಿದ್ದು ಅವಳನ್ನೇ. ಇದರ ಪರಿವು ನನಗೆ ಇರಲಿಲ್ಲ.  I got carried away. ಆದರೆ ಅವಳು ತನ್ನ ಸೀಟಿನಲ್ಲಿ ಇರಲಿಲ್ಲ, ತುಸು ಬೇಜಾರಾದರು ನನ್ನ ಉಡುಪಿನ ಸಂದರ್ಶನ ಎಲ್ಲರಿಗು ಮಾಡಿಸುವ ತವಕ. ಕಂಡವರು ಚೆನ್ನಾಗಿದೆ ಅಂದರು, ಆದರು ಆ ಮಾತು ಅವಳ ಬಾಯಿಂದ ಕೇಳುವ ತವಕ. ಹೀಗೆ ಸಿಸ್ಟಮ್ ಲಾಗ್ ಇನ್ ಆಗುತಿರಲು ಅವಳು ಸಹ ಬಂದಳು, ನನ್ನ ಉಡುಪನ್ನು ಕಂಡು ಚೆನ್ನಾಗಿದೆ ಎಂದಳು. ಆಗಲೇ ಅವಳನ್ನು ಕಂಡಿದ್ದು. ಕೆಂಪು ಸೀರೆ ಬಹಳ ನಾಜೂಕಾಗಿ ಸಂಪ್ರದಾಯಬದ್ದವಾಗಿ ತೊಟ್ಟಿದ್ದಳು. ಕಂಡೊಡನೆಯೇ ಮನಸೋತೆನು ನಾನು. ಅವಳು ಸೀಟಿಗೆ ಹೋಗಿ ಕೂರುತಿದ್ದಂತೆಯೇ ನನಗೆ ಪಿಂಗ್ ಮಾಡಿ 'Looking ಸ್ಮಾರ್ಟ್' ಎಂದಳು. ನಾ ಪ್ರತಿಕ್ರಿಯಯಾಗಿ ಧನ್ಯವಾದ ಹೇಳಿ,   ಅವಲಿಗಿಂತಲೂ ಎನಿಲ್ಲವೆಂದೆ. ಅದಕ್ಕೆ ಅವಳು ಕುಶಿ ಪಟ್ಟಳು ಮತ್ತೆ ಅಲ್ಲಿಗೆ ಆ ಕ್ಷಣದ ಮಾತು ಮುಗಿದಿತ್ತು. ಬಹಳ ಕೆಲಸವಿದ್ದುದ್ದರಿಂದ  ಕೆಲಸದ ಕಡೆ ಗಮನ ಹರಿಸಿ ನಿರೀಕ್ಷೆಗಿಂತ ಬೇಗನೆ ಮುಗಿಸಿದ್ದೆ. ನಂತರ ಶುರುವಾಗಿದ್ದು ಫೋಟೋ ಸೆಶನ್. ನಮ್ಮ ಟೀಂ ಫೋಟೋ ತೆಗೆಯುತ್ತಿದ್ದಂತೆಯೇ ಅವಳು ಸಹ ಬಂದಳು. ಇಬ್ಬರು Colleague ಜೊತೆ ಫೋಟೋ ತೆಗೆಸಿಕೊಂಡಳು. ನನಗೆ ಚುರುಕ್ ಅನಿಸಿತು ಆದರೆ ಇದೆ ನೆಪದಲ್ಲಿ ನನದು ಸಹ ಅವಳ ಜೊತೆ ಒಂದು ಫೋಟೋ ತೆಗೆಸಿಕೊಲ್ಲಬೇಕೆನಿಸಿತು. ಇದೆ ಚಾನ್ಸ್ ಎಂದು ತಿಳಿದು, ಮತೊಬ್ಬರ ಕೈಗೆ ಮೊಬೈಲ್ ಕೊಟ್ಟು ನಾನು ಕೂಡ ಅವರ ಮಧ್ಯದಲ್ಲಿ ಸೇರಿ ಫೋಟೋ ತೆಗಿಸಿಕೊಳ್ಳಲು ಸಜ್ಜಾದೆ. ಅದೇ ಟೈಮ್ ಗೆ ಮೊದಲಿದ್ದ ಇಬ್ಬರು ಆಲ್ರೆಡಿ ತೆಗಿಸಿಕೊಂದಿದ್ದರಿಂದ ಹೊರಟು ಹೋದರು. ಉಳಿದದ್ದು ಮಾತ್ರ ನಾನು ಅವಳು. ಸಂದರ್ಬ ಮೂಡಿಬಂದ ಪರಿ ನನಗೆ ಎಲ್ಲಿಲ್ಲದ ಆನಂದವನ್ನು ಉಂಟುಮಾಡಿತ್ತು. ದರಿಸಿದ ಡ್ರೆಸ್ ಮಹಿಮೆಯೋ ಅಥವಾ ಮನದಲ್ಲಿ ಅರಿಯದೇ ಮೂಡಿದ ಭಾವನೆಯೂ, ಆ ಕ್ಷಣ ವಧು ವರ ಎಂಬಂತೆ ಭಾಸವಾಯಿತು. ನಂತರ ಅವಳ ಜೊತೆಯೇ ಕೂಡಿ ಫ್ಯಾಷನ್ ಶೋ ನಡೆಸಿದ್ದು, ಅವಳದ್ದು ಕೆಲವು ಪಿಕ್ಸ್ ತೆಗೆದ್ದದ್ದು ಮತ್ತೆ ವೀಡಿಯೊ ಮಾಡಿದ್ದು ಎಲ್ಲವು ಹೀಗೆ ನಡೆದು ಹೋಯಿತು. ಸಂಜೆ ಆಫೀಸಿನಿಂದ ಹೊರಟೆ, ಅವಳು ಎಂದಿನಂತೆಯೇ ಬೈ ಹೇಳಿ. ಥ್ಯಾಂಕ್ಸ್ ಹೇಳಿ ಬೀಳ್ಕೊಟ್ಟಳು. ಮತ್ತೆ ಕಾರಿನಲ್ಲಿ ಇವಳದೇ ಚಿಂತೆ ನಡೆದಿತ್ತು  ನಂತರ ಥಟ್ಟನೆ ಎದ್ದಂತೆ, ಮೂಡುತ್ತಿರುವ ಭಾವನೆಗಳ ಕಡೆ ಗಮನ ಹರಿಯಿತು.

ಎಲ್ಲಿಯೋ ಬಂಡಿಯು ಹಳಿ ತಪ್ಪುತ್ತಿದೆ. ಮತ್ತೆ ನಾನು ನನ್ನ ಹಳೆಯ ಹುಡುಗಿಯ ಮರೆತು, ಅವಳ ಜಾಗವನ್ನು ಇವಳು ತುಂಬಿದಂತೆ ಭಾಸವಾಗಿದೆ .. ಭಯವು ಸಹ ಮೂಡಿತು. ಏಕೆ ಹೀಗೆ ಎಂದು ನನಗೆ ತಿಳಿಯದು. ಹಿಂದೆ ನಡೆದ ಘಟನೆಗಳೋ ಅಥವಾ ಕಹಿ ಅನುಭವವೋ ಅರಿಯೆ ಆದರೆ ಅವುಗಳ ಸೆಣೆಸಾಟ ನನ್ನ ಮನದ ಜೊತೆಯಲಿ ಹಾಗು ಮೂಡುತ್ತಿರುವ ಹೊಸ ಭಾವನೆಗಳ ಜೊತೆಯಲಿ ನಡೆದಿವೆ. ಈ ಸೆನೆಸಾಟ ಮತ್ತು ಅವಳ ಕನಸು ನನ್ನನ್ನು ಹೆಚ್ಚೆತ್ತು ಕೂರುವಂತೆ ಮಾಡಿವೆ. ಯಾವಾಗ ಹೀಗೆ ಒಂದು ಮನುಷ್ಯನಿಗೆ ಆಗ್ಗುವುದು ಎಂದು ಯೋಚಿಸಿದಾಗ ಉತ್ತರ ಸಿಕ್ಕಿದು ಮಾತ್ರ ಎರಡು. ಒಂದು ಪ್ರೀತಿ ಮೂಡಿದಾಗ, ಎರಡು ಅದೇ ಪ್ರೀತಿಯು ಕೈ ಕೊಟ್ಟಾಗ. ಆದರೆ ಇದರಲ್ಲೇ ಯಾವುದು ನಿಜವೆಂದು ಅರಿಯೆ. ಹಳೆಯ ಪ್ರೀತಿಯು ಕೈ ಚೆಲ್ಲಿ ಹೋದಮೇಲೆ ಮತ್ತೆ ಇದರ ಸಹವಾಸ ಬೇಡವೆಂದು ೨.೫ ವರ್ಷಗಳಿಂದ ಹುಡುಗಿಯರ ಪರಿಚಯದಿಂದ ದೂರವಿದ್ದೆ. ಇಂದಿಗೂ ಹಳೆಯ ಪ್ರೀತಿಯ ನೋವು ಹಸಿಯಾಗಿಯೇ ಇರಲು, ಕೆಲ ದಿವಸಗಳ ಹಿಂದೆ ಪರಿಚಯವಾದ ಹುಡುಗಿಯ ಅಳಲು ತೊಳಲು ಮೂಡಿದೆ ಈ ಮನದಲಿ. ಮೊನ್ನೆಯವರೆಗೂ ಯಾವುದೇ ಭಾವನೆ ನನಗೆ ಅವಳ ಮೇಲೆ ಇರಲಿಲ್ಲ ಆದರೆ ಇದ್ದಕಿದ್ದಂತೆ ನನ್ನನು ಕಾಡತೊಡಗಿರುವಳು. ಈ ರೀತಿಯೇ ಹಿಂದೆ ಕೂಡ ಆಗಿದ್ದು, ಆ ಪ್ರೀತಿಯ ಸೋಲಿನ ಭಯ ಮತ್ತೆ ಹಳೆ ಹುಡುಗಿಯನ್ನು ಎಲ್ಲಿ ಮರೆತು ಕೊಟ್ಟ ಮಾತಿಗೆ ತಪ್ಪುವೆನೇನೋ ಎನ್ನುವ ಯೋಚನೆ, ಹೊಸದಾಗಿ ಮೂಡುತ್ತಿರುವ ಭಾವನೆಗಳ ಹೊಸಕಾಕುವ ಪ್ರಯತ್ನ ಮಾಡಿಸುತ್ತಿವೆ. ನನ್ನ ಗೆಳತಿಯ ಬಳಿ ಇದನ್ನು ಚರ್ಚಿಸಿದಾಗ, ವಾಸ್ತವಗಳ ನೆನಪಿಸಿದಳು. ಆ ವಾಸ್ತವಗಳು ಕೂಡ ನನಗೆ ಎದುರಾಗಿ ನಿಂತಿರಿವುದರಿಂದ,  ನನ್ನದು ಪ್ರೀತಿಯಾದರು ಅಲ್ಲಿಯೇ ಅದನ್ನು ಸಮಾಧಿ ಮಾಡುವ ಕಟು ನಿರ್ದಾರ. ಅವಳಿಂದ ಎಷ್ಟು ಸಾಧ್ಯವಾದರೆ ಅಷ್ಟು ದೂರವಿದ್ದರೆ ಎಲ್ಲವು ಸುಗಮವಾಗುವುದು ಮತ್ತೆ ಇದು ಬಹುಷಃ ಆಕರ್ಷನೆಯಾಗಿದ್ದರ ಬಹಳ ಕಾಲ ನಿಲ್ಲಲಾರದು ಎಂದು ಯೋಚಿಸಿ, ಅವಳಿಂದ ದೂರವಿರುವ ದೃಡ ನಿರ್ದಾರ ಮಾಡಿಯೇ ಮಲಗಿದ್ದು. ಆದರು ಇದು ಏನು ಮಾಯೆಯೊ, ಕನಸಲಿ ಕಾಡಿ ಹೆಚ್ಚೆತ್ತು ಕೂರುವಂತೆ ಮಾಡಿವೆ.

ನನದೆನ್ನುವುದಾದರೆ ನನಗೆ ಸಿಗುವುದು ಎಂದು  ಕಾಯುವೆನೆ ಹೊರತು ಮತ್ತೆ ಪ್ರೀತಿಯ ಜಂಜಾಟದಲಿ ಬೀಳಬಾರದು. I should not get carried away. ಮುಂದೆ ಎಲ್ಲವು ದೈವ ನಿರ್ಣಯ.

       
                         


       

Friday, January 25, 2013

ಕನಸಿನಿಂದ ಕಂಪ್ಯೂಟರ್ ಗೆ - ಒಂದು Love Letter



ಏನಿದು ಕನಸಿಂದ ಕಂಪ್ಯೂಟರ್ ಗೆ?? ಅದು Love Letter...!!! ಎಂದು ಆಲೋಚನೆಗೆ ಒಳಗಾದಿರ ? ಮುಂದೆ ಓದಿ, ನಿಮಗೆ ತಿಳಿಯುತ್ತೆ .

ಮುಂಜಾನೆ ವೇಳೆ ಅಂದು ಕಾಲೇಜಿನಲ್ಲಿ ಏನೋ ಅರಿಯದ ಒಂದು ಸಂಬ್ರಮ. ಏನೋ ಒಳ್ಳೆಯ ಮುನ್ಸೂಚನೆ. ಕಾಲೇಜಿನಲ್ಲಿ ಅರ್ಪಿತ ಎಂದು ಒಬ್ಬಳು CRUSH ಇದ್ದಳು ನನಗೆ , ನೋಡೋಕೆ ಕುಳ್ಳಿ ಆದರು ಬಹಳ ಸುಂದರ. ಮುದ್ದಾದ ಮುಖ, ನೋಡಿದರೆ ಗಿಲ್ಲಬೇಕು ಎನ್ನುವಂತಹ ಅವಳ ಕೆನ್ನೆ ಇನ್ನೂ  ನಗುವು ಜೊತೆಯಾದರೆ ದೇವತೆಯಂತೆ ಕಾನುತಿದ್ದಳು ನನ್ನ ಕಣ್ಣಿಗೆ.
ಹೀಗಿರುವಾಗ, ಒಮ್ಮೆ ನಾ ಅವಳಿಗೆ Propose ಮಾಡಿದ್ದೆ, ಆದರೆ ಭಯದಿಂದ ಒಪ್ಪಿರಲಿಲ್ಲ. ಸ್ವಲ್ಪ ಕಾಲಾವಕಾಶ ಬೇಕೆಂದು ಕೇಳಿದ ಅವಳು ೩ ತಿಂಗಳು ಕಳೆದಿದ್ದರು ಉತ್ತರ ನೀಡಲಿಲ್ಲ .

ಆದರೆ ಅಂದು, ಒಮ್ಮೆಲ್ಲೆ ಬಂದು ಒಂದು ಪತ್ರವನ್ನು ಕೊಟ್ಟು ಹೋದಳು. ಆಗಲೆ ತಿಳಿದಿತ್ತು ಅದು ಪ್ರೇಮ ಪತ್ರವೆಂದು. ಆದರು ಅದನ್ನು ತೆಗೆದು ಓದಿದನಂತರ ಖಚಿತ ಪಡಿಸಿಕೊಳ್ಳುವ ಎಂದು ಅದನ್ನು  ಓದತೊಡಗಿದೆ. ಅದರಲ್ಲಿ ಬರೆದ ಪ್ರತಿ ಅಕ್ಷರವು ನನ್ನ ಮನ ತಟ್ಟಿತ್ತು. ಆ ಪತ್ರ ಹೇಗಿತ್ತು, ಅದರಲ್ಲಿ ಏನು ಬರೆದಿದ್ದಳು ಎಂದು ತಿಳಿದಿಕೊಳ್ಳುವ ಕುತೂಹಲ ನಿಮಗೆ ಮೂಡಿದೆ ಎಂದು ತಿಳಿಯಿತು. ಅದು ಹೇಗಿತ್ತು.......

"ಆಗಲಿ ಒಂದು ಸವಿನೆನಪು....

ಎಲ್ಲವೂ ಶುರುವಾಗಿದ್ದು ನೀವು ನನಗೆ 'ಮತ್ತೊಮ್ಮೆ ಆಲೋಚಿಸಿ ನೋಡಿ' ಎಂದಾಗ. ಹೌದು, ಮೊದಮೊದಲು ನಿಮ್ಮನ ನೋಡಿದಾಗ ತುಂಬಾ ಬೈದುಕೊಳ್ತಾ ಇದ್ದೆ, ನೀವೇನಾದರೂ ಬಂದು Propose ಮಾಡಿದರೆ F*** off ಎನ್ನಬೇಕು ಅಂದುಕೊಳ್ತಾ ಇದ್ದೆ. ಆದರೆ ಇವೆಲ್ಲರ ನಡುವೆ ಎಲ್ಲೋ ಒಂದು ಕಡೆ ತಿಳಿಯದ ಭಾವನೆ ಮೂಡಿತ್ತು. ಅಂದಿನಿಂದಲೇ ನನ್ನಗೆ ತಿಳಿಯದಂತೆ ನಿಮ್ಮನ್ನು ಗಮಿನಿಸುತ್ತಿದೆ. ಏಕೆ ಹೀಗೆ ಎಂದು ಪ್ರಶ್ನೆ ಮೂಡಿದಾಗ ಉತ್ತರ ಇರಲ್ಲಿಲ್ಲ.

ನಿಮ್ಮ ನಗು, ನಿಮ್ಮ ಒಳ್ಳೆತನ, ನಿಮ್ಮ ನಿಶ್ಕಲ್ಮಶವಾದ  ಮನಸು, ನಿಮಗೆ ಯಾವುದೇ ಕೆಟ್ಟ ಅಭ್ಯಾಸ ಇಲ್ಲದಿರುವುದು ಅಂಡ್ ಓದಿನಲ್ಲಿ ಸಹ ಮೇಲುಗೈ ಎಂದು ಕೇಳ್ಪಟ್ಟೆ. ನಂತರ ಮತ್ತೆ ಅದೇ ಪ್ರಶ್ನೆ, ನನಗೇಕೆ ಇದೆಲ್ಲಾ ಅಂತ... ನನ್ನನ್ನು ನಾನೇ ಸಮಜಾಯಿಸಿಕೊಳ್ಳುತಿದ್ದೆ. ಆದರು ಪ್ರೀತಿ ಎಂಬ ಮಾಯೆ ನನ್ನನ್ನು ಬಿಡಲಿಲ್ಲ...

ಆಗಲೇ ಎಲ್ಲವು ಅರ್ಥವಾಗಿದ್ದು, ಕೋಪ ಬರಬೇಕದರು, ಬಯ್ದರು, ಬೇಜಾರು ಮಾಡಿಕೊಂಡರು, ದೂರವಿದ್ದರು ನಿಮ್ಮ ಕಡೆ ನನ್ನ ಕಣ್ಣು ಸೆಳೆಯುತಿದದ್ದು ಇವೆಲ್ಲವೂ ಪ್ರೀತಿ ಇದ್ದರೆ ಮಾತ್ರ ಸಾಧ್ಯ ಎಂದು. ಅದೇ ಪ್ರೀತಿಯೆಂದು..

ಕೊನೆಗೂ ಮನಬಿಚ್ಚಿ ಹೇಳುತ್ತಿರುವೆ "I Love You". ನೀವೇ ನನ್ನ ಪ್ರಪಂಚ, ನೀವೇ ನನಗೆ ಎಲ್ಲಾ ...

ತುಂಬಾ ದಿವಸ ಕಳೆದಿರುವುದರಿಂದ, ನಿಮಗೆ ಇನ್ನು ಆ ಭಾವನೆ ಇದಿಯೋ ಇಲ್ಲವೋ ತಿಳಿಯದೆ ಬರೆದಿರುವೆ ಈ ಪ್ರೇಮ ಪತ್ರ....

ಇಂತಿ ನಿಮ್ಮ ಪ್ರೀತಿಯ
 ಒಪ್ಪಿಕೊಂಡರೆ ಸಂಗಾತಿ, ಇಲ್ಲವಾದರೆ ಗೆಳತಿ"

ಹೀಗೆ ಬರೆದ ಆಕೆ ನನ್ನ ಕಣ್ಣೆದುರಿಗೆ ಕುತೂಹಲದಿಂದ ಎದುರುನೋದುತ್ತಿದ್ದಳು. ಆಗಲೇ ALARM CLOCK ಒಡೆದುಕೊಲ್ಲುತಿತ್ತು.. ತಟ್ಟನೆ ಎದ್ದೆ ನಂತರ ತಿಳಿಯಿತು ಇದು ಬರಿ ಕನಸೆಂದು..:(:(

ಆದರು, It is always good to wake up with a beautiful dream...

ಈಗ ನಿಮಗೆ ಅರ್ಥವಾಗಿರಬೇಕು "ಕನಸಿನಿಂದ ಕಂಪ್ಯೂಟರ್ ಗೆ - ಒಂದು Love Letter" 

ಮತ್ತೆ ಬರುವೆ ಮತ್ತೊಂದು ಶೀರ್ಷಿಕೆಯೊಂದಿಗೆ...:):)  

Sunday, January 22, 2012

ಮೊದಲ ಸೆಳೆತ... (First Crush)



ಪ್ರೀತಿ ಜೀವನದ ಅತಿ ಸುಂದರವಾದ ಪುಟ. ಅದರಲ್ಲೂ ಮೊದಲನೇ ಪ್ರೀತಿಯ ನೆನಪು ಅತಿ ಮಧುರ...

ಎಲ್ಲರಿಗು ಇರುವಂತೆ ನನಗು ಕೂಡ ಆ ಮೊದಲನೇ ಸೆಳೆತದ ನೆನಪು. ಅದು ಪ್ರೀತಿಯೋ ಅಥವಾ ಸೆಳೆತೆವೋ ಅರಿಯದ ಒಂದು ವಯಸು. ಆಗ ನಾನು 1st PUC ಓದುತಿದ್ದೆ. ಎಲ್ಲರಂತೆ ನನ್ನಲ್ಲೂ ಕಾಲೇಜ್ ಎಂದರೆ ಏನೋ ಒಂದು ಉತ್ಸಾಹ. ಅದರ ನಡುವಲ್ಲಿ ಹುಡುಗು ವಯಸಿನ ಆಸೆಗಳು. Girl friend ಬೇಕು ಎನ್ನುವ ಆಸೆ, ಅವಳ ಜೊತೆ ಅಲ್ಲಿ ಇಲ್ಲಿ ತಿರುಗುವ ಆಸೆ.... ಬಹುಷಃ ಇದು ಎಲ್ಲರಿಗು ಮೂಡುವ ಆಸೆ ಅನಿಸುತ್ತದೆ. ಆದರೆ ನನಗೆ ಆ ರೀತಿ ಯಾವುದೇ ಬಗೆಯ ಆಸೆಗಳು ಇರಲ್ಲಿಲ್ಲ. ಏನೇ ಆದರು ಈ ಪ್ರೀತಿ ಜಂಜಾಟದಲ್ಲಿ ಬೀಳಬಾರದು ಎನ್ನುವ ಒಂದು ದೃಡ ನಿರ್ಧಾರ. 

ಆ ನಿರ್ಧಾರ ನಾಶವಾಗಿದ್ದು ಆ ನನ್ನ ಬೆಡಗಿಯ ಕಂಡ ಕ್ಷಣ. ನೋಡಿದ್ದ್ದು ಅವಳನ್ನು BTS ಬಸ್ನಲ್ಲಿ, ಪ್ರತಿ ದಿನ ಅದೇ ಬಸ್ಸಿನಲ್ಲಿ ನಾ ಕಾಲೇಜ್ ಗೆ ಹೊರಡುತ್ತಿದೆ. ಅವಳು ಸಹ next ಸ್ಟಾಪ್ (White field ) ನಲ್ಲಿ ಬಸ್ಸೇರುತಿದ್ದಳು. HAL bus  stop  ನಲ್ಲಿ ಇಳಿಯುತ್ತಿದಳು. ಅಲ್ಲಿವರೆಗೂ ಅವಳನ್ನು ನೋಡುವುದೇ ನನ್ನ ಕೆಲಸ. ಕೆಂಪು ಮೈ ಬಣ್ಣ, ನೀಲಿ ಕಣ್ಣುಗಳು ನೋಡಲು ಶಿಲೆಯಂತೆ ಇದ್ದಳು ಅವಳು. ಅವಳ ಆ ಕಣ್ಣುಗಳಿಗೆ ನಾ ಸೋತಿದ್ದು. ಅಬ್ಬ ಇಂದಿಗೂ ಆ ಕಣ್ಣುಗಳು ನನ್ನ ಕಣ್ಣೆದುರಲ್ಲೇ ಇರುವುದು. ನೋಡಲು ಅವಳು ಅತಿ ಸುಂದರ.

ಕೆಲವು ದಿನಗಳು ಕಳೆದಂತೆ ಆಕೆಯ ನೋಟವು ಸಹ ನನ್ನೆಡೆಗೆ ಬಂದಿತು. ಅಂದಿನಿಂದ ಪರಸ್ಪರ ನೋಟಗಳು. ಅವಳನ್ನು ನೋಡಿ ನಾ smile ಕೊಡುವುದು, ಆಕೆಯು ಸಹ ನನ್ನ ನೋಡಿ ನಾಚಿ smile ಕೊಡುವುದು. ಆಹಾ, ಆ ಕ್ಷಣಗಳು ನೆನೆಯುತಿದ್ದರೆ ಇಂದಿಗೂ ಮೈ ಜುಮ್ಮ್ ಎನ್ನುವುದು. ಇದರಲ್ಲೇ ಇಬ್ಬರಿಗೂ ಸಂತೋಷ. ನಾ ಕಾಣದಿದ್ದರೆ ಆಕೆ ಹುಡುಕುವುದು, ಜನ rush ಆದಾಗ ಒಬ್ಬರನ್ನೊಬ್ಬರು ನೋಡಲು ಹರ ಸಾಹಸ ಮಾಸುವುದು ಮತ್ತೆ ಬಸ್ಸಿನಿಂದ ಇಳಿಯುವಾಗ ಒಂದು ಸಣ್ಣ ನಗೆ ಬೀರಿ bye ಹೇಳುವುದು. ನೆನಪಿಸಿಕೊಂಡರೆ ಮೈ ರೋಮಾಂಚನಗೊಳ್ಳುವುದು. 

ಆದರೆ, ಇಬ್ಬರಿಗೂ ಒಬ್ಬರನೊಬ್ಬರು ಮಾತಾಡಿಸುವ ಧೈರ್ಯವಿರಲಿಲ್ಲ. ಹೀಗೆ ಒಂದು ವರ್ಷ ಕಳೆಯಿತು. ನಂತರ ಪರೀಕ್ಷಾ ಸಮಯದ ವೆಳಾಪಟ್ಟಿ ಬದಲಾವಣೆಯಿಂದಾಗಿ ಆ ಬಸ್ಸಿನಲ್ಲಿ ಹೋಗಲು ಆಗುತಿರಲ್ಲಿಲ್ಲ. ಪರೀಕ್ಷೆ ಮುಗಿದಮೇಲೆ ಮತ್ತೆ ಸುಮ್ಮನೆ ಅದೇ ಬಸ್ಸೇರಿ ಅವಳನ್ನು ಹುಡ್ಕಿದೆ. ಆದರೆ ಯಾಕೋ ಮತ್ತೆ ಆ ಬೆಡಗಿ ಕಾಣಲೇ ಇಲ್ಲ. 

2nd PUC ಗೆ ನಾ ಮಾವನ ಮನೆಗೆ ಬರಬೇಕಾಯಿತು, ಆದುದರಿಂದ, ನಂತರ ಅವಳನ್ನು ನೋಡಲು ಆಗಲೇ ಇಲ್ಲ. ಕೆಲವು ದಿನಗಳನಂತರ ಅವಳನ್ನು ಅದೇ bus  stop ನಲ್ಲಿ ನೋಡಿದ ನೆನಪು......

ಮತ್ತೆ ಎಂದಿಗೂ ಅವಳನ್ನು ನೋಡಲು ಆಗಲಿಲ್ಲ. ಹೆಸರು ಸಹ ಗೊತ್ತಿಲ್ಲ. ಆದರೆ ಆ ದಿನಗಳ ಈ ಸವಿ ನೆನಪು ಎಲ್ಲ ನೆನಪುಗಳಲ್ಲಿ ಅತಿ ಮಧುರವಾದ ನೆನಪು....

ನಿಮಗೂ ನಿಮ್ಮ ಮೊದಲನೇ ಪ್ರೀತಿಯ ಆ ದಿನಗಳು ನೆನಪಿದೆಯಾ...????

Thursday, November 3, 2011

ಅ೦ತು ಇ೦ತು 1st Rank




ಆಗ ನಾನು 7 ನೇ ತರಗತಿ. ನಿಮಗೆ ಗೊತ್ತಿರುವ೦ತೆ ಮಾನಸ ನನ್ನ ಗೆಳತಿ. ಆದರು ಇಬ್ಬರು ಒ೦ದೇ ತರಗತಿಯಲ್ಲಿ ಇದ್ದುದ್ದರಿ೦ದ ಓದಿನಲ್ಲಿ ತು೦ಬಾ ಪೈಪೊಟಿ. ಮಾನಸ ಮತ್ತೆ ನಾನು ಇಬ್ಬರು 5 ನೇ ತರಗತಿಯಿ೦ದ ಜೊತೆಯಾಗಿ ಓದ್ದುತ್ತಿದ್ದೆವು. ಇಬ್ಬರಿಗು ಮೊದಲನೆ ರಾ೦ಕ್ ಬರುವ ಇಚ್ಹೆ. ಆ ನಿಟ್ಟಿನಲ್ಲಿ ನಮ್ಮಿಬ್ಬರಿಗೆ ಎಲ್ಲದರಲ್ಲು ಪೈಪೊಟಿ. ಆದರೆ ಯಾವಾಗಲು ಆಕೆಯೆ ಮೊದಲು ನ೦ತರ ನಾನು. ಅ೦ತು ಇ೦ತು ನನು ಏಳನೆ ತರಗತಿವರೆಗು ಕಾಯಬೇಕಾಯಿತು. ಆಗ ಮಧ್ಯ ವಾರ್ಶಿಕ ಪರೀಕ್ಷೆ. ಇಬ್ಬರು ಸಕ್ಕಥ್ ಕಷ್ಟ ಪಟ್ಟು ಓದಿ ಪರೀಕ್ಷೆ ಬರೆದೆವು. ಏ೦ದಿನ೦ತೆ ಪ್ರತಿಯೊ೦ದು Subject ಅ೦ಕ ಹೇಳುತಿದ್ದ೦ತೆ ಕೂಡಿ ಹಾಕಿ ಯಾರದು Leading ಅಲ್ಲಿ ಇದೆ ಅ೦ತ ನೊಡೊದು. ಕೊನೆಗು ಆದ್ದದ್ದೆ ಬೇರೆ. ಇಬ್ಬರದು ಮೊದಲನೆ ರಾ೦ಕ್. ಆಗ ಸ್ವಲ್ಪ ಹೊಟ್ಟೆಕಿಚ್ಹು ಆಕೆಗೆ. ನನಗೆ ಎಲ್ಲಿಲ್ಲದ ಖುಶಿ. ಆದರು ನಾನೊಬ್ಬನೆ  ಬ೦ದಿದ್ದರೆ ಚೆನ್ನ ಎನ್ನುವ ಆಲೋಚನೆ.

ಹೀಗೆ ಕೆಲವು ದಿನಗಳು ಕಳೆದ ಮೆಲೆ ಮತ್ತೆ ಪರೀಕ್ಷೆ ಸಮಯ. ಈ ಸಾರಿ ಆದರು ನಾನೊಬ್ಬನೆ ಮೊದಲು ಬರಬೇಕು ಎ೦ದು ನಾನು, ನಾನು ಮೊದಲು ಬರಬೇಕು ಎ೦ದು ಮಾನಸ. ಮತ್ತೆ ಅದೆ ಪೈಪೊಟಿ. ಆದರೆ ಮತ್ತೆ ಅ೦ತು ಇ೦ತು ನಾನೆ ಮೊದಲು ಬ೦ದೆ. ಆದರೆ ಅದಕ್ಕಿ೦ತ ಖುಶಿ ಎನೆ೦ದರೆ ಮಾನಸ ಎರಡನೇ ರಾ೦ಕ್.

ಏಲ್ಲಿಲ್ಲದ ಖುಶಿ ನನಗೆ, ಹಾಗು ನನ್ನ ಗುರುಗಳಿಗು ಸಹ. ಏಕೆ೦ದರೆ ಎಲ್ಲರಿಗು ಆಕೆಗಿ೦ತ ನನ್ನ ಕ೦ಡರೆ ಬಹಳ ಪ್ರೀತಿ. ಆಗ ಮಾನಸ ಅತ್ತ ಪರಿ ಇ೦ದಿಗು ನೆನಪಿದೆ.

ಓದುವಾಗಿನ ದಿನಗಳ ಇಂತಹ ನೆನಪುಗಳು ಅತಿ ಮಧುರ.....:):)

Tuesday, March 29, 2011

ನನ್ನ ಬಾಲ್ಯದ ಗೆಳತಿ


ಹೀಗೆ ಮತ್ತೊಂದು ಸವಿ ನೆನಪು... ಕೆಲವು ದಿನಗಳ ಹಿಂದೆ ಹೀಗೆ ಇಬ್ಬರು ಮಕ್ಕಳು (ಒಂದು ಹುಡುಗಿ ಮತ್ತು ಹುಡಿಗಿ, ಸುಮಾರು 6 ವರ್ಷ) ಹೀಗೆ ನನ್ನ ಕಣ್ಣ ಮುಂದೆ ಕೈ ಹಿಡಿದು ನಡೆಯುತ್ತಿದ್ದರು. ಇಬ್ಬರು ಅಣ್ಣ ತಂಗಿ ಏನೋ ಎಂಬ ಕುತೂಹಲದಿಂದ ಅವರನ್ನು ನಿಲ್ಲಿಸಿ ಕೇಳಿದೆ... ಆದರೆ ಅವರಿಬ್ಬರೂ best friends ಅಂತೆ, ಒಂದೇ ಕ್ಲಾಸ್ನಲ್ಲಿ ಓದುತ್ತಾರಂತೆ. ಆ ಇಬ್ಬರು ಮುದ್ದಾದ ಮಕ್ಕಳನ್ನು ಕಂಡಾಗ ನನಗೆ ನೆನಪಾದದ್ದು ನನ್ನ ಬಾಲ್ಯದ ಗೆಳತಿ ಮಾನಸ....


ಆಗ ನಾನು ಮೊದಲನೇ ತರಗತಿಯಲ್ಲಿ ಓದುತ್ತಿದ್ದೆ. ಹೊಸದಾಗಿ ಸೇರಿದ ಸ್ಟುಡೆಂಟ್ ಮಾನಸ. ಅಂದಿನಿಂದ ನಮ್ಮಿಬ್ಬರ ನಡುವೆ ಓದುವುದರಲ್ಲಿ ಪೈಪೋಟಿ. ಅಂದಿನವರೆಗೂ ಕ್ಲಾಸ್ನಲ್ಲಿ ನನದೆ 1st Rank. ಆದರೆ ಅವಳು ಬಂದಮೇಲೆ ಅವಳದು ಮೇಲಿನ ಕೈ... ಒಮ್ಮೆ ಅವಳು ಫಸ್ಟ್ ಬಂದರೆ ಮತ್ತೊಮ್ಮೆ ನಾನು... ಹೀಗೆ ಇಬ್ಬರು ಸಹ ಒಳ್ಳೆ ಸ್ನೇಹಿತರಾದೆವು.


ಅಂದು ನನ್ನ (7th Year) birthday... ಶಾಲೆಯಲ್ಲಿ ಚಾಕಲೇಟ್ ಹಂಚಿ ಮನೆಗೆ ಹಿಂದಿರುಗುವಾಗ, ಎಂದಿನಂತೆ ಅವಳು ಸಹ ನನ್ನ ಜೊತೆಯಲ್ಲಿ ಹೊರಟಿದಳು... ಮೊದಲು ಅವಳ ಮನೆ ಸಿಗುತಿತ್ತು, ಅವಳನ್ನು ಡ್ರಾಪ್ ಮಾಡಿ ನಾ ಮನೆಗೆ ಬರುತಿದ್ದೆ.. ಆದರೆ ಅವಳು ಅಂದು ಮನೆಗೆ ಕರೆದಳು... ಅಂದು ನನ್ನ ಮುಖ ತೊಳೆದು clean ಆಗಿ powder ಹಚ್ಚಿ makeup ಮಾಡಿ, ತಿನ್ನುವುದಕ್ಕೆ ಮೊಸರು ಮತ್ತು ಸಕ್ಕರೆ ಕೊಟ್ಟು ಉಪಚಾರ ಮಾಡಿದಳು... ನಂತರ ನಾ ಮನೆಗೆ ಹೊರಟೆ.. ಮನೆಯಲ್ಲಿ ಎಲ್ಲರು ನನ್ನ ರೇಗಿಸಲು ಶುರು ಮಾಡಿದರು....


ಜೊತೆಯಲ್ಲಿ ಕೂಡಿ ಓದುತಿದ್ದೆವು.. ಎಲ್ಲೇ ಹೋದರು ಜೊತೆಯಲ್ಲಿ ಹೋಗುತ್ತಿದೆವು.. ಹೀಗೆ ನಮ್ಮಿಬ್ಬರ ಸ್ನೇಹ ಏಳನೇ ತರಗತಿ ವರೆಗೂ ಸಾಗುತಿತ್ತು..... ನಂತರ ಅವಳಪ್ಪನ transfer ಆಗಿ, ಅವರು ಸಹ ಊರು ಬಿಡಬೇಕಾಯಿತು... ಅವಳನ್ನು ತುಂಬಾ miss ಮಾಡಿಕೊಳ್ತಿದ್ದೆ... ಆದರೆ ಎಲ್ಲಿ ಇರುವಳು ಹೇಗೆ ಇರುವಲ್ಲು ಎಂದು ಈಗಲೂ ತಿಳಿದಿಲ್ಲ...


ಎರಡು ಮೂರು ಬಾರಿ ಅವಳು ಊರಿಗೆ ಬಂದಾಗ ಮನೆಗೆ ಬಂದಿದ್ದಲ್ಲಂತೆ.. ಆದರ ಆ ಸಮಯದಲ್ಲಿ ನಾ ಮನೆಯಲ್ಲಿ ಇರುತಿರಲ್ಲಿಲ್ಲ.. Facebook, Orkut ನಲ್ಲಿ ಸಹ ಟ್ರೈ ಮಾಡಿದೆ, ಆದರೆ ಈಗ ಅವಳು ಹೇಗೆ ಇರುವಳೋ ಗೊತ್ತಿಲ್ಲ.. ಒಮ್ಮೆಯಾದರು ಅವಳು ಸಿಗುವಲೆಂದು ಚಿಕ್ಕ ಆಸೆ ಮನಸಲ್ಲಿ.. ಏಕೆಂದರೆ ಅವಳೇ ನನ್ನ ಮೊದಲ ಬಾಲ್ಯದ ಸ್ನೇಹಿತೆ...


ಮಾನಸ.. " ನೀನು ಯಾವಾಗಲು ನನ್ನ ಸ್ನೇಹಿತೆಯಾಗಿ, ನೆಪಿನಂಗಳದಲ್ಲಿ ಸವಿ ನೆನಪಾಗಿ ಉಳಿಯುವೆ......."


ನಿಮಗೂ ನಿಮ್ಮ ಬಾಲ್ಯದ ಸ್ನೇಹಿತ ಅಥವಾ ಸ್ನೇಹಿತೆಯ ನೆನಪಿದೆಯೇ...??? Keep memorizing...



Tuesday, February 15, 2011

ಅನಿತಾ teacher


ಕೊನೆಗೂ ಬ್ಲಾಗ್ ಬರೆಯಲು ಸಮಯ ಸಿಕ್ಕಿತು... ಇತ್ತೀಚಿನ ಡಿನಗಳಲಿ ಕೆಲಸ ಹೆಚ್ಚು ಅದಕ್ಕೆ ಟೈಮ್ ಸಿಗಲೇ ಇಲ್ಲ... ಹಾಗು ಈಗೂ ಟೈಮ್ ಮಾಡಿಕೊಂಡು ಹೀಗೆ ಯೋಚನೆಯಲ್ಲಿ ಮುಳುಗಿದಾಗ ನನಗೆ ನೆನಪಾದದ್ದು ನನ್ನ teacher. ಅವರ ಹೆಸರು ಅನಿತಾ...ಅನಿತಾ ಮಿಸ್ ಎಂದೇ ಕರೆಯುತಿದ್ದೆ. ಆಗ ಬಹುಷಃ ನಾನು ಮೊದಲನೇ ತರಗತಿ... (Srinivasa school, Varthur)


ಆಕೆಗೆ ನಾನೆಂದರೆ ಬಹಳ ಇಷ್ಟ..... ಎಷ್ಟೋ ಬಾರಿ ನನ್ನ ಹಾಗೆ ಇರಬೇಕೆಂದು, ಓದಬೇಕೆಂದು ಎಲ್ಲ ಹುಡುಗರನ್ನ ಬಯ್ಯುತಿದ್ದರು. ನಾನು ಒಂದು ತರಾ teacher's ಪೆಟ್ ಇದ್ದ ಹಾಗೆ. ಅವರಿಗೆ ನನ್ನ Handwriting ಎಂದರು, ನಾನು notes ಬರೆಯುವ ವಿಧಾನ ಹಾಗು ಅದಾನ Maintain ಮಾಡುತಿದ್ದ ವಿಧಾನ ತುಂಬಾ ಇಷ್ಟ ಆಗುತಿತ್ತು.


ಅವರ ಕಯಲ್ಲಿ ಭೇಷ್ ಎನಿಸಿಕೊಳಲ್ಲು ನಾನು ಚೆನ್ನಾಗಿ ಓದುತಿದ್ದೆ, ಬರೆಯುತಿದ್ದೆ . ಕ್ಲಾಸ್ ಅಲ್ಲಿ ನನ್ನದೇ ಮೇಲಿನ ಕೈ. ಇದನ್ನು ನೋಡಿ ಕೆಲವರು ಹುಡುಗರಿಗೆ ಹೊಟ್ಟೆ ಕಿಚ್ಚು. ಆದರು care ಮಾಡುತಿರಲಿಲ್ಲ. ನನಗೆ ನನ್ನ ಟೀಚರ್ ಓದುವುದರಲ್ಲಿ ಸ್ಪೂರ್ಥಿಯಾದರು. ಕೆಲವೊಮ್ಮೆ Homework ಮಾಡದೇ ಇದ್ದರೆ ನನಗೆ excuse . ಬೇರೆ ಎಲ್ಲರಿಗು Punishment... ಇದನ್ನೆಲಾ ನೆನಪಿಸಿಕೊಂಡರೆ ನನ್ನ ಬಗ್ಗೆ ನನಗೆ ಹೆಮ್ಮೆ ....


ಹೀಗೆ ಒಂದು ಸರಿ exam ನಡೆಯುತ್ತಿತ್ತು.. ಆಗ ನನಗೆ exam ಅಂದ್ರೆ ಸಿಕ್ಕಾಪಟ್ಟೆ ಜ್ವರ ಬರುತಿತ್ತು (but not because of fear).. ಅಂದು ನನಗೆ maths exam. ಬರೆಯುವುದಕ್ಕೆ ಆಗುತಿರಲಿಲ್ಲ. ಹಾಗು ಈಗೂ complete ಮಾಡಿದೆ ಆ ಸಮಯದಲ್ಲಿ ಪ್ರತಿ ಹತ್ತು ನಿಮಿಷಕ್ಕೆ ಹೊರಗಡೆ ಹೋಗಿ ನೀರು ಕುಡಿಯುತಿದ್ದೆ . ಆಗ exam time ನಲ್ಲಿ ಬ್ರೇಕ್ ಗೆ ಬಿಡುತ್ತಿರಲಿಲ್ಲ. ಆದರೆ ಅನಿತಾ ಟೀಚರ್ ನನ್ನ ಸ್ಥಿತಿ ಕಂಡು ಕೇಳಿದಾಗಲೆಲ್ಲ ಹೊರ ಬಿಡುತಿದ್ದರು. ಕೊನೆಗೆ ನನ್ನ ಅವಸ್ತೆ ನೋಡಿ, ಅವರೇ ಒಂದು Tablet ತರಿಸಿ ಕುಡಿಸಿದರು.. (It was so sweet of her). ಕೊನೆಗೆ Maths ಅಲ್ಲಿ ಮತ್ತೆ ನನದೆ highest marks ಬಂತು. ಮತ್ತೆ ನನ್ನ example ತೊಗೊಂಡು ಬೇರೆ ಹುಡುಗರನ್ನ ಬಯ್ಯುತಿದ್ದರು.. ಆಗ ನಾನು ಆಕಾಶದೆತ್ತರಕ್ಕೆ ಉಬ್ಬಿ ಹೋಗುತಿದೆ...


ಅನಂತರ ಅವರು ಶಾಲೆ ಬಿಟ್ಟರು.. ಆದರೆ ಅಂದಿನಿಂದ Degree ವರೆಗೂ ಸಹ I was teacher's pet..... ಈಗ ಎಲ್ಲಿ ಇರುವರೋ, ಹೇಗೆ ಇರುವರೋ ನನ್ನ ಬಾಲ್ಯದ ಸವಿ ನೆನಪುಗಲ್ಲಿ ಅವರು ಸದಾ ಇರುತ್ತಾರೆ...


ಹೀಗೆ ನೆನಪಿಸಿಕೊಂಡರೆ ಗುರುಗಳ ಜೊತೆ ಇದ್ದ ಆತ್ಮೀಯತೆ ನೆನಪಾಗುವುದು... sometimes tears just roll down from eyes (especially when I think about Gracy teacher. She died in an accident)


ನಿಮಗೂ ನಿಮ್ಮ ಗುರುಗಳ ನೆನಪಿದೆಯೇ...??? ನೀವು ಎಂದಾದರು teacher's pet ಅಗ್ಗಿದ್ದಿರಾ...??