Friday, January 9, 2015

ಕೆಲವು ಸಾರಿ ಆ ದೇವರು ನಾವು ಬಯಸಿದ್ದನ್ನು ಕೊಟ್ಟು ನಮ್ಮ ಹೃದಯಕೆ ಘಾಸಿ ಉಂಟು ಮಾಡುತ್ತಾನೆ. ಅಥವಾ ನಾವು ಬಯಸದಿದ್ದರು ನಡೆಯುವುದೇನೋನಡೆಯುತ್ತದೆ ಎಂದು ಕೂಡ ಹೇಳುತ್ತಾರೆ ಕೆಲವರು. ಏನೋ ಅರಿಯದ ಕಳವಳ ಹಾಗು ಗೊಂದಲ ಮನಸಲಿ. ಹಳೇ ಆಫೀಸಿಗೆ ಹುಮ್ಮನಸಸ್ಸಿನಿಂದ ನನ್ನ ಗೆಳೆಯರನ್ನು ಹಾಗು ಅವಳನ್ನು ನೋಡಲು ಹೊರಟೆ. ಬಂದೊಡನೆಯೇ ನನ್ನ ಕಣ್ಣುಗಳು ಹುಡುಕಿದ್ದೇ ಅವಳನ್ನು. ಎಲ್ಲ ತಿಳಿದಿದ್ದರೂ ದೂರದಿಂದ ನೋಡಿ, ಮೌನದಲೇ ಪ್ರೀತಿಯ ಆಟ ನಡೆದಿತ್ತು. ಎಲ್ಲವು ನನ್ನ ಹಿಡಿತದಲ್ಲೇ ಇದೆ ಅಂತ ಎಂದುಕೊಂಡಿದ್ದೆ, ಆದರೆ ಅದು ಎಷ್ಟು ಮಟ್ಟಿಗೆ ನಿಜ ಎಂದು ಈಗ ತಿಳಿದಿದೆ. ಅವಳನ್ನು ಹುಡುಕಿದ ಕಣ್ಣುಗಳಿಗೆ ಉಂಟಾಗಿದ್ದು ನಿರಾಸೆ. ಆದರು ಅವಳು ಬರುವಳು ಎಂಬ ನಂಬಿಕೆ ನನ್ನನು ಹಾತುರದಿಂದ ಕಾಯುವಂತೆ ಮಾಡಿತ್ತು.  ಅವಳು ಬಂದರೆ, ಎಂದಿನಂತೆ ಅವಳ ಜೊತೆ ತಿಂಡಿ ಮಾಡುವ ತವಕ. ನನಗೆ ತಿಳಿಯದೆಯೇ ಆ ಕ್ಷಣಗಳಿಗೆ ಕಾಯುತಿದ್ದೆ. ಅವಳ ಬರುವಿಕೆಯನ್ನೇ ಕಾಯುತಿದ್ದ ನನಗೆ, ಅವಳು ಬಂದೊಡನೆಯೇ ಮೂಡಿತ್ತು ಸನ್ತಸ. ಅವಳನ್ನು ಕಂಡು ಬಹಳ ದಿವಸವಾದುದ್ದರಿಂದ,  ಅವಳನ್ನು ಕಂಡೊಡನೆಯೇ ಓಡಿಹೋಗಿ ಅಪ್ಪಿಕೂಳುವ ತವಕ. ಆದರೆ ನನ್ನ ಮನಸನ್ನು ಹಿಡಿತದಲ್ಲಿಟ್ಟುಕೊಂಡೆ.    

ಹೌದು, ನನಗೆ ಎಲ್ಲ ತಿಳಿದಿತ್ತು. ನನ್ನ ಅವಳ ಮಧ್ಯೆ ಪ್ರೀತಿಯ ಸಂಬಂಧ ಎಂದಿಗೂ ಸಾಧ್ಯವಾಗಲಾರದು ಎಂದು ತಿಳಿದಿತ್ತು. ಅವಳ ಮನಸಲ್ಲಿ ಮತ್ತೊಬ್ಬರಿಗಾಗಿ ಇದ್ದ ತವಕ ಹಾಗು ಪ್ರೀತಿಯ ಬಗ್ಗೆಯೂ ತಿಳಿದಿತ್ತು. ಇದೆಲ್ಲ ತಿಳಿದೇ, ಅವಳ ಜೊತೆ ಒಂದಾಗುವ ಕನಸಿಗೆ ಕಡಿವಾಣ ಹಾಕಿದ್ದೆ. ಆದರು ಎಲ್ಲಿಯೋ ಒಂದು ಮೂಲೆಯಲ್ಲಿ ನಾ ಅವಳಿಗೆ ಮನಸೋತಿದ್ದೆ. ಇಂದು ತಿಳಿದದ್ದು ಏನೆಂದರೆ, ಅವಳ ಹುಡುಗ ಅವಳಿಗೆ ಪ್ರೊಪೋಸ್ ಮಾಡಿದನಂತೆ ಹಾಗು ಅವಳು ಅವನ ಜೊತೆ ಜೀವನ ಹಂಚಿಕೊಳ್ಳಲು ದೇಶ ಬಿಟ್ಟು ಹೋಗುತ್ತಿರುವಳಂತೆ. ಇದನ್ನು ಕೇಳಿದೊಡನೆಯೇ, ಅವಳ ಕನಸು ನನಸಾಯಿತೆಂದು ಆನಂದ ಪಟ್ಟೆ. ಆದರೆ ಈ ಹುಚ್ಚು ಮನಸಿಗೆ ಅರ್ಥವಾಗದ ವಿಷಯವೆಂದರೆ, ಅವಳು ಅದೇ ಸಮಯದಲ್ಲಿ ನನ್ನಿಂದ ದೂರವಾಗುತ್ತಿರುವಳೆಂದು. ಮೆಲ್ಲಗೆ ಈ ವಿಷಯ ಅರಿತ ಮನಸಿಗೆ, ಎಷ್ಟು ಸಂತೋಷವಿತ್ತೋ ಅಷ್ಟೇ ದು:ಖವು ಮೂಡತೊಡಗಿತು.  ಎಲ್ಲರ ಮುಂದೆ ನಗುವಿನಿಂದ ಅದನ್ನು ಮರೆಮಾಚಿದರು ಮನಸಿನ ಗೊಂದಲಕ್ಕೆ ಕಡಿವಾಣ ಹಾಕಲು ಆಗಲೇ ಇಲ್ಲ. ದಿನವೆಲ್ಲ, ಅವಳು ಹಾದು ಹೋದಲೆಲ್ಲ ಅವಳ ಮೊಗವನ್ನು ನೋಡುವುದೇ ಆಗಿತ್ತು. ಅವಳ ಕನಸು ನಿಜವಾಯಿತೆಂದು ಆನಂದ ಪಡಬೇಕೋ, ಅಥವಾ ನನ್ನ ಈ ಕನಸು ಕನಸಾಗಿಯೇ ಉಳಿಯಿತೆಂದು ಸುಮ್ಮನಿರಬೇಕೋ ಅರಿಯಲಾಗಲಿಲ್ಲ.  ಮೊದಲ ಸಲ ನಾನು ಕೇಳಿಕೊಂಡಿದ್ದು ನೆರವೇರಿರುವುದಕ್ಕೆ,  ಹೃದಯಕೆ ಘಾಸಿ ಉಂಟಾಗಿದೆ. ಆದರು ನನ್ನನ್ನು ನಾನು ಸಮಜಾಯಿಸಿಕೊಳ್ಳುವುದು ಬಿಟ್ಟರೆ ಬೇರೆ ದಾರಿಯಿಲ್ಲ. ಅವಳಿಗೆ ಈ ಜನುಮದಲಿ ನನ್ನ ಭಾವನೆಯ ಸುಳಿವು ಸಿಗುವುದಿಲ್ಲ. ಆದರೆ ಉಸಿರಿರುವವರೆಗೂ ಉಳಿದುಬಿದುವಳು ಕಿರು ನಗೆಯಾಗಿ, ಸವಿ ನೆನಪಾಗಿ.  

ಕೇಳಿದ್ದನ್ನು ಕೊಡದೆಯು ನೀನು
ನೋವಿನ ಶೀರ್ಷಿಕೆಯ ಬರೆದೆ

ಓ ಭಗವಂತ

ಈಗ ಕೇಳಿದ್ದನ್ನು ಕನಿಕರಿಸಿ
ಹೃದಯ ಘಾಸಿ ಮಾಡಿದೆ

ಅರಿಯದೆಯೂ  ಸಿಲುಕಿದೆ
ಅರಿತು ಸಹ ಮತ್ತೆ ಸಿಲುಕಿದೆ

ಇದು ನಿನ್ನ ಆಟವೋ
ಅಥವಾ ವಿಧಿ ವಿಪರ್ಯಾಸವೋ? 

Thursday, January 8, 2015

ಒಂದು ಸಣ್ಣ ಪ್ರೀತಿ ಕಥೆ

ನಾ ಬರೆಯುವ ಈ ಶೀರ್ಷಿಕೆ ಸವಿ ನೆನಪಾಗಿ ಉಳಿಯುವುದೋ ಅಥವಾ ನನಸಾಗಿ ನನ್ನ ಜೀವನವಾಗುವುದೋ ನಾ ತಿಳಿಯೆ. ಆದರು ೧೩ನೆ  September ೨೦೧೪ ರ ಬೆಳ್ಳಂ ಬೆಳ್ಳಿಗೆ ನನ್ನ ನಿದ್ದೆಯನ್ನು ಕೆಡವಿದ ಕನಸಿನ ಹಾಗು ನನ್ನ ಭಾವನೆಯ ಪರಿಚಯ ಇಲ್ಲಿದೆ.

ಈಗ ನಿಮ್ಮೆಲರಿಗೂ ಈ ಪರಿಸ್ಥಿತಿಗೆ ಕಾರಣವಾದ ಸನ್ನಿವೇಶಗಳನ್ನು ಪರಿಚಯ ಮಾಡಿಸಿ ಕೊಡುವೆ. ನಡೆದ ಪ್ರತಿಯೊಂದು ಸಣ್ಣ ಸಂಘಟನೆಯು ಬರೆಯುತ್ತಿರುವೆನು. ಏಕೆಂದರೆ ಈ ಸಣ್ಣ ವಿಷಯಗಳೇ ಮನಕೆ ಘಾಸಿ ಮಾಡುವುದು     

ಇದು ನಡೆದದ್ದು ೨ ದಿವಸಗಳ ಹಿಂದೆ. ಎಂದಿನಂತೆ ಆಫೀಸಿಗೆ ಹೋರಟ ನನಗೆ ಮೊದಲು ಎದುರಾಗಿದ್ದು ಅವಳು. ಅಹುದು, ಪ್ರತಿ ದಿವಸ ಮೊದಲ ದರ್ಶನ ಅವಳದ್ದೇ ಆದರೆ ಎಂದು ಏನು ಅನಿಸಿರಲಿಲ್ಲ. ಗುಡ್ ಮಾರ್ನಿಂಗ್ ಹೇಳಿ, ನನ್ನ ಸೀಟಿನಲ್ಲಿ ಕುಳಿತು ಕೆಲಸ ಆರಂಭಿಸುತ್ತಿದೆ. ಆದರೆ, ಈ ದಿನ ಮಾತ್ರ ಅವಳು ಕಂಡಿದ್ದು ಸುಂದರಿಯಂತೆ. ಅವಳು ಆ ದಿನ ಬಹುಷಃ ಆಫೀಸಿಗೆ ತಡವಾದ್ದರಿಂದ, ಅವಳ ತಲೆಯ ಕೂದಲನ್ನು ಸರಿಯಾಗಿ ಒಣಗಿಸಿರಲ್ಲಿಲ್ಲ. ಆ ತಡವಿದ ಕೂದಲು ಹಾಗು ಅವಳ ಮೇಕ್ಅಪ್ ರಹಿತ ಮುಖವನ್ನು ಕಂಡು ಎದೆಯೊಳಗೆ ಗಂಟೆ ಬಾರಿಸಿದಂತೆ ಭಾಸವಾಯಿತು. ಆ ದಿನವಿಲ್ಲ ನನಗೆ ಅರಿಯದೆಯೇ ನನ್ನ ಕಣ್ಣು ಅವಳನ್ನು ಹುಡುಕತೊಡಗಿತ್ತು. ಅವಳು ಹಾದುಹೊದಾಗಲೆಲ್ಲ ತಿಳಿ ಮಂದಹಾಸದ ಪರಿಚಯಗಳು ನಡೆದಿದ್ದವು. ಅವಳಿಗೆ ತನ್ನ ಕೆಲಸದ ವಿಷಯದಲ್ಲಿ ಸಹಾಯ ಮಾಡುವ ಅಧ್ರುಷ್ಟವು ನನಗೆ ಒಲಿದಿತ್ತು,  ಅಂತೆಯ ಆಫೀಸಿನಲ್ಲಿ ಮರುದಿನ ಒಂದು ಕಾರ್ಯಕ್ರಮ ಆಯೋಜಿಸಲು ಅವಳಿಗೆ ಸಹಾಯ ಮಾಡಿದೆ. ಇದರಿಂದ ಪುಳಕಿತಗೊಂಡ ಅವಳು, ನನ್ನನು ಸಿಹಿಯಾದ ಸಕ್ಕರೆಯೆಂದು ತನ್ನ ಸಕ್ಕರೆಯ ಬಾಯಿಂದ ಅಕ್ಕರೆಯಾಗಿ ನುಡಿದಳು. ಅದ್ದನು ನುಡಿದ ಪರಿ ನನನ್ನು ಆಗಲೇ ಹಳ್ಳಕ್ಕೆ ಬೀಳುವಂತೆ ಮಾಡಿತ್ತು. ಮನೆಗೆ ಹೊರಟ ಸಮಯ, ಕಾರಿನಲ್ಲಿ ಕೂಡ ಅವಳು ನುಡಿದ ಪರಿಯ ನೆನಪಿಸಿಕೊಂಡು ಖುಷಿ ಪಟ್ಟೆ. ಇದಕ್ಕೆ ಸರಿಯಂತೆ ಕಾರಿನಲ್ಲಿ ಹಾಕಿದ್ದ ಪ್ರೀತಿಯ ಹಾಡುಗಳು ನನ್ನನು ಮನಸೂರೆ ಮಾಡಿದ್ದವು. ಮನೆಗೆ ಬಂದು ಯೋಚಿಸಿದ ಮೇಲೆಯೇ ತಿಳಿದದ್ದು, ಜೀವನದ ಗಾಡಿ ಮತ್ತೆ  ಹಳಿತಪ್ಪುತ್ತಿದೆಯೆಂದು. ಕೂಡಲೇ ಏನಾದರು ಮಾಡಿ ಸರಿಯಾದ ಟ್ರ್ಯಾಕ್ ಗೆ ತರಬೇಕೆಂದು, ಮೂಡಿದ ಭಾವನೆ ಕೇವಲ ಆಕರ್ಷನೆಯೆಂದು, ಇದುಪ್ರೀತಿಯಾದರು ಸಹವಾಸ ಬೇಡವೆಂದು ನಿರ್ದರಿಸಿ, ಆ ಯೋಚನೆ ಅಲ್ಲಿಗೆ ಬಿಟ್ಟು ಮೇರಿ ಕೊಂ ಮೂವಿ ನೋಡುತ್ತಾ ಸಂಜೆಯಕಳೆದೆ. ಸುಖ ನಿದಿರೆಯು ಬಂತು. ಮತ್ತೆ ಅದರ ಯೋಚನೆ ಶುರುವಾಗಿದ್ದು ಮರುದಿನ ಬೆಳ್ಳಿಗ್ಗೆ ಅದೇ ಬೆಡಗಿಯನ್ನು ಸೀರೆಯಲ್ಲಿ ಕಂಡಾಗ. ಎಣ್ಣೆಯಿಂದ ಜಾರಿ ತುಪ್ಪಕ್ಕೆ ಬಿದ್ದ ಪರಿಸ್ಥಿತಿ ನನದು.

ಇಂದು ಆಫೀಸಿನಲ್ಲಿ Ethnic Day ಇದುದ್ದರಿಂದ ನಾನು ಸಂಪ್ರದಾಯದಂತೆ ಪಂಚೆಯುಟ್ಟು ಹೊರಟಿದ್ದೆ. ಅವಳು ಸಹ ಹಿಂದಿನ ದಿವಸ ಸೀರೆಯ ಬಗ್ಗೆ ನನ್ನ ಜೊತೆ ಚರ್ಚಿಸಿದ ನೆನಪಾಯ್ತು. ತನ್ನ ಬಳಿ ಕೇವಲ ಕೆಂಪು ಹಾಗು ಕಪ್ಪು ಬಣ್ಣದ ಸೀರೆ ಇದೆಯೆಂದು, ಯಾವುದು ಚೆಂದವೆಂದು ನನ್ನ ಕೇಳಿದ್ದಳು. ನಾನು ಕೆಂಪು ಬಣ್ಣದ ಸೇರಿಯನ್ನು ಉಡಲು ಹೇಳಿದ್ದೆ ಆದರೆ ಅವಳು ಕಪ್ಪು ಬಣ್ಣದ ಸಿರಿಯಲಿ ಬರಬಹುದೆಂದು ಯೋಚಿಸಿದೆ. ಅವಳು ಸೀರಿಯಲ್ಲಿ ಸುಂದರವಾಗಿ ಕಾಣುವಲು ಎಂದು, ಸೀರೆಯ ಮಹತ್ಯದ ಬಗ್ಗೆಯೂ ತುಸು ಹೇಳಿದ್ದ ನೆನಪಾಯ್ತು ನನಗೆ. ಈ ಸಂಭಾಷನೆಯೆಲ್ಲ ನನ್ನ ಕಡೆಯಿಂದ ಕ್ಯಾಶುಯಲ್ ಆಗೇ ನಡೆದಿತ್ತು. ಮುಂಜಾನೆ ಆಫೀಸಿಗೆ ಬಂದಂತೆ ನನ್ನ ಕಣ್ಣು ಮಾತ್ರ ಹುಡುಕಿದ್ದು ಅವಳನ್ನೇ. ಇದರ ಪರಿವು ನನಗೆ ಇರಲಿಲ್ಲ.  I got carried away. ಆದರೆ ಅವಳು ತನ್ನ ಸೀಟಿನಲ್ಲಿ ಇರಲಿಲ್ಲ, ತುಸು ಬೇಜಾರಾದರು ನನ್ನ ಉಡುಪಿನ ಸಂದರ್ಶನ ಎಲ್ಲರಿಗು ಮಾಡಿಸುವ ತವಕ. ಕಂಡವರು ಚೆನ್ನಾಗಿದೆ ಅಂದರು, ಆದರು ಆ ಮಾತು ಅವಳ ಬಾಯಿಂದ ಕೇಳುವ ತವಕ. ಹೀಗೆ ಸಿಸ್ಟಮ್ ಲಾಗ್ ಇನ್ ಆಗುತಿರಲು ಅವಳು ಸಹ ಬಂದಳು, ನನ್ನ ಉಡುಪನ್ನು ಕಂಡು ಚೆನ್ನಾಗಿದೆ ಎಂದಳು. ಆಗಲೇ ಅವಳನ್ನು ಕಂಡಿದ್ದು. ಕೆಂಪು ಸೀರೆ ಬಹಳ ನಾಜೂಕಾಗಿ ಸಂಪ್ರದಾಯಬದ್ದವಾಗಿ ತೊಟ್ಟಿದ್ದಳು. ಕಂಡೊಡನೆಯೇ ಮನಸೋತೆನು ನಾನು. ಅವಳು ಸೀಟಿಗೆ ಹೋಗಿ ಕೂರುತಿದ್ದಂತೆಯೇ ನನಗೆ ಪಿಂಗ್ ಮಾಡಿ 'Looking ಸ್ಮಾರ್ಟ್' ಎಂದಳು. ನಾ ಪ್ರತಿಕ್ರಿಯಯಾಗಿ ಧನ್ಯವಾದ ಹೇಳಿ,   ಅವಲಿಗಿಂತಲೂ ಎನಿಲ್ಲವೆಂದೆ. ಅದಕ್ಕೆ ಅವಳು ಕುಶಿ ಪಟ್ಟಳು ಮತ್ತೆ ಅಲ್ಲಿಗೆ ಆ ಕ್ಷಣದ ಮಾತು ಮುಗಿದಿತ್ತು. ಬಹಳ ಕೆಲಸವಿದ್ದುದ್ದರಿಂದ  ಕೆಲಸದ ಕಡೆ ಗಮನ ಹರಿಸಿ ನಿರೀಕ್ಷೆಗಿಂತ ಬೇಗನೆ ಮುಗಿಸಿದ್ದೆ. ನಂತರ ಶುರುವಾಗಿದ್ದು ಫೋಟೋ ಸೆಶನ್. ನಮ್ಮ ಟೀಂ ಫೋಟೋ ತೆಗೆಯುತ್ತಿದ್ದಂತೆಯೇ ಅವಳು ಸಹ ಬಂದಳು. ಇಬ್ಬರು Colleague ಜೊತೆ ಫೋಟೋ ತೆಗೆಸಿಕೊಂಡಳು. ನನಗೆ ಚುರುಕ್ ಅನಿಸಿತು ಆದರೆ ಇದೆ ನೆಪದಲ್ಲಿ ನನದು ಸಹ ಅವಳ ಜೊತೆ ಒಂದು ಫೋಟೋ ತೆಗೆಸಿಕೊಲ್ಲಬೇಕೆನಿಸಿತು. ಇದೆ ಚಾನ್ಸ್ ಎಂದು ತಿಳಿದು, ಮತೊಬ್ಬರ ಕೈಗೆ ಮೊಬೈಲ್ ಕೊಟ್ಟು ನಾನು ಕೂಡ ಅವರ ಮಧ್ಯದಲ್ಲಿ ಸೇರಿ ಫೋಟೋ ತೆಗಿಸಿಕೊಳ್ಳಲು ಸಜ್ಜಾದೆ. ಅದೇ ಟೈಮ್ ಗೆ ಮೊದಲಿದ್ದ ಇಬ್ಬರು ಆಲ್ರೆಡಿ ತೆಗಿಸಿಕೊಂದಿದ್ದರಿಂದ ಹೊರಟು ಹೋದರು. ಉಳಿದದ್ದು ಮಾತ್ರ ನಾನು ಅವಳು. ಸಂದರ್ಬ ಮೂಡಿಬಂದ ಪರಿ ನನಗೆ ಎಲ್ಲಿಲ್ಲದ ಆನಂದವನ್ನು ಉಂಟುಮಾಡಿತ್ತು. ದರಿಸಿದ ಡ್ರೆಸ್ ಮಹಿಮೆಯೋ ಅಥವಾ ಮನದಲ್ಲಿ ಅರಿಯದೇ ಮೂಡಿದ ಭಾವನೆಯೂ, ಆ ಕ್ಷಣ ವಧು ವರ ಎಂಬಂತೆ ಭಾಸವಾಯಿತು. ನಂತರ ಅವಳ ಜೊತೆಯೇ ಕೂಡಿ ಫ್ಯಾಷನ್ ಶೋ ನಡೆಸಿದ್ದು, ಅವಳದ್ದು ಕೆಲವು ಪಿಕ್ಸ್ ತೆಗೆದ್ದದ್ದು ಮತ್ತೆ ವೀಡಿಯೊ ಮಾಡಿದ್ದು ಎಲ್ಲವು ಹೀಗೆ ನಡೆದು ಹೋಯಿತು. ಸಂಜೆ ಆಫೀಸಿನಿಂದ ಹೊರಟೆ, ಅವಳು ಎಂದಿನಂತೆಯೇ ಬೈ ಹೇಳಿ. ಥ್ಯಾಂಕ್ಸ್ ಹೇಳಿ ಬೀಳ್ಕೊಟ್ಟಳು. ಮತ್ತೆ ಕಾರಿನಲ್ಲಿ ಇವಳದೇ ಚಿಂತೆ ನಡೆದಿತ್ತು  ನಂತರ ಥಟ್ಟನೆ ಎದ್ದಂತೆ, ಮೂಡುತ್ತಿರುವ ಭಾವನೆಗಳ ಕಡೆ ಗಮನ ಹರಿಯಿತು.

ಎಲ್ಲಿಯೋ ಬಂಡಿಯು ಹಳಿ ತಪ್ಪುತ್ತಿದೆ. ಮತ್ತೆ ನಾನು ನನ್ನ ಹಳೆಯ ಹುಡುಗಿಯ ಮರೆತು, ಅವಳ ಜಾಗವನ್ನು ಇವಳು ತುಂಬಿದಂತೆ ಭಾಸವಾಗಿದೆ .. ಭಯವು ಸಹ ಮೂಡಿತು. ಏಕೆ ಹೀಗೆ ಎಂದು ನನಗೆ ತಿಳಿಯದು. ಹಿಂದೆ ನಡೆದ ಘಟನೆಗಳೋ ಅಥವಾ ಕಹಿ ಅನುಭವವೋ ಅರಿಯೆ ಆದರೆ ಅವುಗಳ ಸೆಣೆಸಾಟ ನನ್ನ ಮನದ ಜೊತೆಯಲಿ ಹಾಗು ಮೂಡುತ್ತಿರುವ ಹೊಸ ಭಾವನೆಗಳ ಜೊತೆಯಲಿ ನಡೆದಿವೆ. ಈ ಸೆನೆಸಾಟ ಮತ್ತು ಅವಳ ಕನಸು ನನ್ನನ್ನು ಹೆಚ್ಚೆತ್ತು ಕೂರುವಂತೆ ಮಾಡಿವೆ. ಯಾವಾಗ ಹೀಗೆ ಒಂದು ಮನುಷ್ಯನಿಗೆ ಆಗ್ಗುವುದು ಎಂದು ಯೋಚಿಸಿದಾಗ ಉತ್ತರ ಸಿಕ್ಕಿದು ಮಾತ್ರ ಎರಡು. ಒಂದು ಪ್ರೀತಿ ಮೂಡಿದಾಗ, ಎರಡು ಅದೇ ಪ್ರೀತಿಯು ಕೈ ಕೊಟ್ಟಾಗ. ಆದರೆ ಇದರಲ್ಲೇ ಯಾವುದು ನಿಜವೆಂದು ಅರಿಯೆ. ಹಳೆಯ ಪ್ರೀತಿಯು ಕೈ ಚೆಲ್ಲಿ ಹೋದಮೇಲೆ ಮತ್ತೆ ಇದರ ಸಹವಾಸ ಬೇಡವೆಂದು ೨.೫ ವರ್ಷಗಳಿಂದ ಹುಡುಗಿಯರ ಪರಿಚಯದಿಂದ ದೂರವಿದ್ದೆ. ಇಂದಿಗೂ ಹಳೆಯ ಪ್ರೀತಿಯ ನೋವು ಹಸಿಯಾಗಿಯೇ ಇರಲು, ಕೆಲ ದಿವಸಗಳ ಹಿಂದೆ ಪರಿಚಯವಾದ ಹುಡುಗಿಯ ಅಳಲು ತೊಳಲು ಮೂಡಿದೆ ಈ ಮನದಲಿ. ಮೊನ್ನೆಯವರೆಗೂ ಯಾವುದೇ ಭಾವನೆ ನನಗೆ ಅವಳ ಮೇಲೆ ಇರಲಿಲ್ಲ ಆದರೆ ಇದ್ದಕಿದ್ದಂತೆ ನನ್ನನು ಕಾಡತೊಡಗಿರುವಳು. ಈ ರೀತಿಯೇ ಹಿಂದೆ ಕೂಡ ಆಗಿದ್ದು, ಆ ಪ್ರೀತಿಯ ಸೋಲಿನ ಭಯ ಮತ್ತೆ ಹಳೆ ಹುಡುಗಿಯನ್ನು ಎಲ್ಲಿ ಮರೆತು ಕೊಟ್ಟ ಮಾತಿಗೆ ತಪ್ಪುವೆನೇನೋ ಎನ್ನುವ ಯೋಚನೆ, ಹೊಸದಾಗಿ ಮೂಡುತ್ತಿರುವ ಭಾವನೆಗಳ ಹೊಸಕಾಕುವ ಪ್ರಯತ್ನ ಮಾಡಿಸುತ್ತಿವೆ. ನನ್ನ ಗೆಳತಿಯ ಬಳಿ ಇದನ್ನು ಚರ್ಚಿಸಿದಾಗ, ವಾಸ್ತವಗಳ ನೆನಪಿಸಿದಳು. ಆ ವಾಸ್ತವಗಳು ಕೂಡ ನನಗೆ ಎದುರಾಗಿ ನಿಂತಿರಿವುದರಿಂದ,  ನನ್ನದು ಪ್ರೀತಿಯಾದರು ಅಲ್ಲಿಯೇ ಅದನ್ನು ಸಮಾಧಿ ಮಾಡುವ ಕಟು ನಿರ್ದಾರ. ಅವಳಿಂದ ಎಷ್ಟು ಸಾಧ್ಯವಾದರೆ ಅಷ್ಟು ದೂರವಿದ್ದರೆ ಎಲ್ಲವು ಸುಗಮವಾಗುವುದು ಮತ್ತೆ ಇದು ಬಹುಷಃ ಆಕರ್ಷನೆಯಾಗಿದ್ದರ ಬಹಳ ಕಾಲ ನಿಲ್ಲಲಾರದು ಎಂದು ಯೋಚಿಸಿ, ಅವಳಿಂದ ದೂರವಿರುವ ದೃಡ ನಿರ್ದಾರ ಮಾಡಿಯೇ ಮಲಗಿದ್ದು. ಆದರು ಇದು ಏನು ಮಾಯೆಯೊ, ಕನಸಲಿ ಕಾಡಿ ಹೆಚ್ಚೆತ್ತು ಕೂರುವಂತೆ ಮಾಡಿವೆ.

ನನದೆನ್ನುವುದಾದರೆ ನನಗೆ ಸಿಗುವುದು ಎಂದು  ಕಾಯುವೆನೆ ಹೊರತು ಮತ್ತೆ ಪ್ರೀತಿಯ ಜಂಜಾಟದಲಿ ಬೀಳಬಾರದು. I should not get carried away. ಮುಂದೆ ಎಲ್ಲವು ದೈವ ನಿರ್ಣಯ.