ಕೆಲವು ಸಾರಿ ಆ ದೇವರು ನಾವು ಬಯಸಿದ್ದನ್ನು ಕೊಟ್ಟು ನಮ್ಮ ಹೃದಯಕೆ ಘಾಸಿ ಉಂಟು ಮಾಡುತ್ತಾನೆ. ಅಥವಾ ನಾವು ಬಯಸದಿದ್ದರು ನಡೆಯುವುದೇನೋನಡೆಯುತ್ತದೆ ಎಂದು ಕೂಡ ಹೇಳುತ್ತಾರೆ ಕೆಲವರು. ಏನೋ ಅರಿಯದ ಕಳವಳ ಹಾಗು ಗೊಂದಲ ಮನಸಲಿ. ಹಳೇ ಆಫೀಸಿಗೆ ಹುಮ್ಮನಸಸ್ಸಿನಿಂದ ನನ್ನ ಗೆಳೆಯರನ್ನು ಹಾಗು ಅವಳನ್ನು ನೋಡಲು ಹೊರಟೆ. ಬಂದೊಡನೆಯೇ ನನ್ನ ಕಣ್ಣುಗಳು ಹುಡುಕಿದ್ದೇ ಅವಳನ್ನು. ಎಲ್ಲ ತಿಳಿದಿದ್ದರೂ ದೂರದಿಂದ ನೋಡಿ, ಮೌನದಲೇ ಪ್ರೀತಿಯ ಆಟ ನಡೆದಿತ್ತು. ಎಲ್ಲವು ನನ್ನ ಹಿಡಿತದಲ್ಲೇ ಇದೆ ಅಂತ ಎಂದುಕೊಂಡಿದ್ದೆ, ಆದರೆ ಅದು ಎಷ್ಟು ಮಟ್ಟಿಗೆ ನಿಜ ಎಂದು ಈಗ ತಿಳಿದಿದೆ. ಅವಳನ್ನು ಹುಡುಕಿದ ಕಣ್ಣುಗಳಿಗೆ ಉಂಟಾಗಿದ್ದು ನಿರಾಸೆ. ಆದರು ಅವಳು ಬರುವಳು ಎಂಬ ನಂಬಿಕೆ ನನ್ನನು ಹಾತುರದಿಂದ ಕಾಯುವಂತೆ ಮಾಡಿತ್ತು. ಅವಳು ಬಂದರೆ, ಎಂದಿನಂತೆ ಅವಳ ಜೊತೆ ತಿಂಡಿ ಮಾಡುವ ತವಕ. ನನಗೆ ತಿಳಿಯದೆಯೇ ಆ ಕ್ಷಣಗಳಿಗೆ ಕಾಯುತಿದ್ದೆ. ಅವಳ ಬರುವಿಕೆಯನ್ನೇ ಕಾಯುತಿದ್ದ ನನಗೆ, ಅವಳು ಬಂದೊಡನೆಯೇ ಮೂಡಿತ್ತು ಸನ್ತಸ. ಅವಳನ್ನು ಕಂಡು ಬಹಳ ದಿವಸವಾದುದ್ದರಿಂದ, ಅವಳನ್ನು ಕಂಡೊಡನೆಯೇ ಓಡಿಹೋಗಿ ಅಪ್ಪಿಕೂಳುವ ತವಕ. ಆದರೆ ನನ್ನ ಮನಸನ್ನು ಹಿಡಿತದಲ್ಲಿಟ್ಟುಕೊಂಡೆ.
ಹೌದು, ನನಗೆ ಎಲ್ಲ ತಿಳಿದಿತ್ತು. ನನ್ನ ಅವಳ ಮಧ್ಯೆ ಪ್ರೀತಿಯ ಸಂಬಂಧ ಎಂದಿಗೂ ಸಾಧ್ಯವಾಗಲಾರದು ಎಂದು ತಿಳಿದಿತ್ತು. ಅವಳ ಮನಸಲ್ಲಿ ಮತ್ತೊಬ್ಬರಿಗಾಗಿ ಇದ್ದ ತವಕ ಹಾಗು ಪ್ರೀತಿಯ ಬಗ್ಗೆಯೂ ತಿಳಿದಿತ್ತು. ಇದೆಲ್ಲ ತಿಳಿದೇ, ಅವಳ ಜೊತೆ ಒಂದಾಗುವ ಕನಸಿಗೆ ಕಡಿವಾಣ ಹಾಕಿದ್ದೆ. ಆದರು ಎಲ್ಲಿಯೋ ಒಂದು ಮೂಲೆಯಲ್ಲಿ ನಾ ಅವಳಿಗೆ ಮನಸೋತಿದ್ದೆ. ಇಂದು ತಿಳಿದದ್ದು ಏನೆಂದರೆ, ಅವಳ ಹುಡುಗ ಅವಳಿಗೆ ಪ್ರೊಪೋಸ್ ಮಾಡಿದನಂತೆ ಹಾಗು ಅವಳು ಅವನ ಜೊತೆ ಜೀವನ ಹಂಚಿಕೊಳ್ಳಲು ದೇಶ ಬಿಟ್ಟು ಹೋಗುತ್ತಿರುವಳಂತೆ. ಇದನ್ನು ಕೇಳಿದೊಡನೆಯೇ, ಅವಳ ಕನಸು ನನಸಾಯಿತೆಂದು ಆನಂದ ಪಟ್ಟೆ. ಆದರೆ ಈ ಹುಚ್ಚು ಮನಸಿಗೆ ಅರ್ಥವಾಗದ ವಿಷಯವೆಂದರೆ, ಅವಳು ಅದೇ ಸಮಯದಲ್ಲಿ ನನ್ನಿಂದ ದೂರವಾಗುತ್ತಿರುವಳೆಂದು. ಮೆಲ್ಲಗೆ ಈ ವಿಷಯ ಅರಿತ ಮನಸಿಗೆ, ಎಷ್ಟು ಸಂತೋಷವಿತ್ತೋ ಅಷ್ಟೇ ದು:ಖವು ಮೂಡತೊಡಗಿತು. ಎಲ್ಲರ ಮುಂದೆ ನಗುವಿನಿಂದ ಅದನ್ನು ಮರೆಮಾಚಿದರು ಮನಸಿನ ಗೊಂದಲಕ್ಕೆ ಕಡಿವಾಣ ಹಾಕಲು ಆಗಲೇ ಇಲ್ಲ. ದಿನವೆಲ್ಲ, ಅವಳು ಹಾದು ಹೋದಲೆಲ್ಲ ಅವಳ ಮೊಗವನ್ನು ನೋಡುವುದೇ ಆಗಿತ್ತು. ಅವಳ ಕನಸು ನಿಜವಾಯಿತೆಂದು ಆನಂದ ಪಡಬೇಕೋ, ಅಥವಾ ನನ್ನ ಈ ಕನಸು ಕನಸಾಗಿಯೇ ಉಳಿಯಿತೆಂದು ಸುಮ್ಮನಿರಬೇಕೋ ಅರಿಯಲಾಗಲಿಲ್ಲ. ಮೊದಲ ಸಲ ನಾನು ಕೇಳಿಕೊಂಡಿದ್ದು ನೆರವೇರಿರುವುದಕ್ಕೆ, ಹೃದಯಕೆ ಘಾಸಿ ಉಂಟಾಗಿದೆ. ಆದರು ನನ್ನನ್ನು ನಾನು ಸಮಜಾಯಿಸಿಕೊಳ್ಳುವುದು ಬಿಟ್ಟರೆ ಬೇರೆ ದಾರಿಯಿಲ್ಲ. ಅವಳಿಗೆ ಈ ಜನುಮದಲಿ ನನ್ನ ಭಾವನೆಯ ಸುಳಿವು ಸಿಗುವುದಿಲ್ಲ. ಆದರೆ ಉಸಿರಿರುವವರೆಗೂ ಉಳಿದುಬಿದುವಳು ಕಿರು ನಗೆಯಾಗಿ, ಸವಿ ನೆನಪಾಗಿ.
ಕೇಳಿದ್ದನ್ನು ಕೊಡದೆಯು ನೀನು
ನೋವಿನ ಶೀರ್ಷಿಕೆಯ ಬರೆದೆ
ಓ ಭಗವಂತ
ಈಗ ಕೇಳಿದ್ದನ್ನು ಕನಿಕರಿಸಿ
ಹೃದಯ ಘಾಸಿ ಮಾಡಿದೆ
ಅರಿಯದೆಯೂ ಸಿಲುಕಿದೆ
ಅರಿತು ಸಹ ಮತ್ತೆ ಸಿಲುಕಿದೆ
ಇದು ನಿನ್ನ ಆಟವೋ
ಅಥವಾ ವಿಧಿ ವಿಪರ್ಯಾಸವೋ?