ಏನಿದು ಕನಸಿಂದ ಕಂಪ್ಯೂಟರ್ ಗೆ?? ಅದು Love Letter...!!! ಎಂದು ಆಲೋಚನೆಗೆ ಒಳಗಾದಿರ ? ಮುಂದೆ ಓದಿ, ನಿಮಗೆ ತಿಳಿಯುತ್ತೆ .
ಮುಂಜಾನೆ ವೇಳೆ ಅಂದು ಕಾಲೇಜಿನಲ್ಲಿ ಏನೋ ಅರಿಯದ ಒಂದು ಸಂಬ್ರಮ. ಏನೋ ಒಳ್ಳೆಯ ಮುನ್ಸೂಚನೆ. ಕಾಲೇಜಿನಲ್ಲಿ ಅರ್ಪಿತ ಎಂದು ಒಬ್ಬಳು CRUSH ಇದ್ದಳು ನನಗೆ , ನೋಡೋಕೆ ಕುಳ್ಳಿ ಆದರು ಬಹಳ ಸುಂದರ. ಮುದ್ದಾದ ಮುಖ, ನೋಡಿದರೆ ಗಿಲ್ಲಬೇಕು ಎನ್ನುವಂತಹ ಅವಳ ಕೆನ್ನೆ ಇನ್ನೂ ನಗುವು ಜೊತೆಯಾದರೆ ದೇವತೆಯಂತೆ ಕಾನುತಿದ್ದಳು ನನ್ನ ಕಣ್ಣಿಗೆ.
ಹೀಗಿರುವಾಗ, ಒಮ್ಮೆ ನಾ ಅವಳಿಗೆ Propose ಮಾಡಿದ್ದೆ, ಆದರೆ ಭಯದಿಂದ ಒಪ್ಪಿರಲಿಲ್ಲ. ಸ್ವಲ್ಪ ಕಾಲಾವಕಾಶ ಬೇಕೆಂದು ಕೇಳಿದ ಅವಳು ೩ ತಿಂಗಳು ಕಳೆದಿದ್ದರು ಉತ್ತರ ನೀಡಲಿಲ್ಲ .
ಆದರೆ ಅಂದು, ಒಮ್ಮೆಲ್ಲೆ ಬಂದು ಒಂದು ಪತ್ರವನ್ನು ಕೊಟ್ಟು ಹೋದಳು. ಆಗಲೆ ತಿಳಿದಿತ್ತು ಅದು ಪ್ರೇಮ ಪತ್ರವೆಂದು. ಆದರು ಅದನ್ನು ತೆಗೆದು ಓದಿದನಂತರ ಖಚಿತ ಪಡಿಸಿಕೊಳ್ಳುವ ಎಂದು ಅದನ್ನು ಓದತೊಡಗಿದೆ. ಅದರಲ್ಲಿ ಬರೆದ ಪ್ರತಿ ಅಕ್ಷರವು ನನ್ನ ಮನ ತಟ್ಟಿತ್ತು. ಆ ಪತ್ರ ಹೇಗಿತ್ತು, ಅದರಲ್ಲಿ ಏನು ಬರೆದಿದ್ದಳು ಎಂದು ತಿಳಿದಿಕೊಳ್ಳುವ ಕುತೂಹಲ ನಿಮಗೆ ಮೂಡಿದೆ ಎಂದು ತಿಳಿಯಿತು. ಅದು ಹೇಗಿತ್ತು.......
"ಆಗಲಿ ಒಂದು ಸವಿನೆನಪು....
ಎಲ್ಲವೂ ಶುರುವಾಗಿದ್ದು ನೀವು ನನಗೆ 'ಮತ್ತೊಮ್ಮೆ ಆಲೋಚಿಸಿ ನೋಡಿ' ಎಂದಾಗ. ಹೌದು, ಮೊದಮೊದಲು ನಿಮ್ಮನ ನೋಡಿದಾಗ ತುಂಬಾ ಬೈದುಕೊಳ್ತಾ ಇದ್ದೆ, ನೀವೇನಾದರೂ ಬಂದು Propose ಮಾಡಿದರೆ F*** off ಎನ್ನಬೇಕು ಅಂದುಕೊಳ್ತಾ ಇದ್ದೆ. ಆದರೆ ಇವೆಲ್ಲರ ನಡುವೆ ಎಲ್ಲೋ ಒಂದು ಕಡೆ ತಿಳಿಯದ ಭಾವನೆ ಮೂಡಿತ್ತು. ಅಂದಿನಿಂದಲೇ ನನ್ನಗೆ ತಿಳಿಯದಂತೆ ನಿಮ್ಮನ್ನು ಗಮಿನಿಸುತ್ತಿದೆ. ಏಕೆ ಹೀಗೆ ಎಂದು ಪ್ರಶ್ನೆ ಮೂಡಿದಾಗ ಉತ್ತರ ಇರಲ್ಲಿಲ್ಲ.
ನಿಮ್ಮ ನಗು, ನಿಮ್ಮ ಒಳ್ಳೆತನ, ನಿಮ್ಮ ನಿಶ್ಕಲ್ಮಶವಾದ ಮನಸು, ನಿಮಗೆ ಯಾವುದೇ ಕೆಟ್ಟ ಅಭ್ಯಾಸ ಇಲ್ಲದಿರುವುದು ಅಂಡ್ ಓದಿನಲ್ಲಿ ಸಹ ಮೇಲುಗೈ ಎಂದು ಕೇಳ್ಪಟ್ಟೆ. ನಂತರ ಮತ್ತೆ ಅದೇ ಪ್ರಶ್ನೆ, ನನಗೇಕೆ ಇದೆಲ್ಲಾ ಅಂತ... ನನ್ನನ್ನು ನಾನೇ ಸಮಜಾಯಿಸಿಕೊಳ್ಳುತಿದ್ದೆ. ಆದರು ಪ್ರೀತಿ ಎಂಬ ಮಾಯೆ ನನ್ನನ್ನು ಬಿಡಲಿಲ್ಲ...
ಆಗಲೇ ಎಲ್ಲವು ಅರ್ಥವಾಗಿದ್ದು, ಕೋಪ ಬರಬೇಕದರು, ಬಯ್ದರು, ಬೇಜಾರು ಮಾಡಿಕೊಂಡರು, ದೂರವಿದ್ದರು ನಿಮ್ಮ ಕಡೆ ನನ್ನ ಕಣ್ಣು ಸೆಳೆಯುತಿದದ್ದು ಇವೆಲ್ಲವೂ ಪ್ರೀತಿ ಇದ್ದರೆ ಮಾತ್ರ ಸಾಧ್ಯ ಎಂದು. ಅದೇ ಪ್ರೀತಿಯೆಂದು..
ಕೊನೆಗೂ ಮನಬಿಚ್ಚಿ ಹೇಳುತ್ತಿರುವೆ "I Love You". ನೀವೇ ನನ್ನ ಪ್ರಪಂಚ, ನೀವೇ ನನಗೆ ಎಲ್ಲಾ ...
ತುಂಬಾ ದಿವಸ ಕಳೆದಿರುವುದರಿಂದ, ನಿಮಗೆ ಇನ್ನು ಆ ಭಾವನೆ ಇದಿಯೋ ಇಲ್ಲವೋ ತಿಳಿಯದೆ ಬರೆದಿರುವೆ ಈ ಪ್ರೇಮ ಪತ್ರ....
ಇಂತಿ ನಿಮ್ಮ ಪ್ರೀತಿಯ
ಒಪ್ಪಿಕೊಂಡರೆ ಸಂಗಾತಿ, ಇಲ್ಲವಾದರೆ ಗೆಳತಿ"
ಹೀಗೆ ಬರೆದ ಆಕೆ ನನ್ನ ಕಣ್ಣೆದುರಿಗೆ ಕುತೂಹಲದಿಂದ ಎದುರುನೋದುತ್ತಿದ್ದಳು. ಆಗಲೇ ALARM CLOCK ಒಡೆದುಕೊಲ್ಲುತಿತ್ತು.. ತಟ್ಟನೆ ಎದ್ದೆ ನಂತರ ತಿಳಿಯಿತು ಇದು ಬರಿ ಕನಸೆಂದು..:(:(
ಆದರು, It is always good to wake up with a beautiful dream...
ಈಗ ನಿಮಗೆ ಅರ್ಥವಾಗಿರಬೇಕು "ಕನಸಿನಿಂದ ಕಂಪ್ಯೂಟರ್ ಗೆ - ಒಂದು Love Letter"
ಮತ್ತೆ ಬರುವೆ ಮತ್ತೊಂದು ಶೀರ್ಷಿಕೆಯೊಂದಿಗೆ...:):)
hahaha good one!! Sweet and beautiful..:)
ReplyDelete- Pooja