ಪ್ರೀತಿ ಜೀವನದ ಅತಿ ಸುಂದರವಾದ ಪುಟ. ಅದರಲ್ಲೂ ಮೊದಲನೇ ಪ್ರೀತಿಯ ನೆನಪು ಅತಿ ಮಧುರ...
ಎಲ್ಲರಿಗು ಇರುವಂತೆ ನನಗು ಕೂಡ ಆ ಮೊದಲನೇ ಸೆಳೆತದ ನೆನಪು. ಅದು ಪ್ರೀತಿಯೋ ಅಥವಾ ಸೆಳೆತೆವೋ ಅರಿಯದ ಒಂದು ವಯಸು. ಆಗ ನಾನು 1st PUC ಓದುತಿದ್ದೆ. ಎಲ್ಲರಂತೆ ನನ್ನಲ್ಲೂ ಕಾಲೇಜ್ ಎಂದರೆ ಏನೋ ಒಂದು ಉತ್ಸಾಹ. ಅದರ ನಡುವಲ್ಲಿ ಹುಡುಗು ವಯಸಿನ ಆಸೆಗಳು. Girl friend ಬೇಕು ಎನ್ನುವ ಆಸೆ, ಅವಳ ಜೊತೆ ಅಲ್ಲಿ ಇಲ್ಲಿ ತಿರುಗುವ ಆಸೆ.... ಬಹುಷಃ ಇದು ಎಲ್ಲರಿಗು ಮೂಡುವ ಆಸೆ ಅನಿಸುತ್ತದೆ. ಆದರೆ ನನಗೆ ಆ ರೀತಿ ಯಾವುದೇ ಬಗೆಯ ಆಸೆಗಳು ಇರಲ್ಲಿಲ್ಲ. ಏನೇ ಆದರು ಈ ಪ್ರೀತಿ ಜಂಜಾಟದಲ್ಲಿ ಬೀಳಬಾರದು ಎನ್ನುವ ಒಂದು ದೃಡ ನಿರ್ಧಾರ.
ಆ ನಿರ್ಧಾರ ನಾಶವಾಗಿದ್ದು ಆ ನನ್ನ ಬೆಡಗಿಯ ಕಂಡ ಕ್ಷಣ. ನೋಡಿದ್ದ್ದು ಅವಳನ್ನು BTS ಬಸ್ನಲ್ಲಿ, ಪ್ರತಿ ದಿನ ಅದೇ ಬಸ್ಸಿನಲ್ಲಿ ನಾ ಕಾಲೇಜ್ ಗೆ ಹೊರಡುತ್ತಿದೆ. ಅವಳು ಸಹ next ಸ್ಟಾಪ್ (White field ) ನಲ್ಲಿ ಬಸ್ಸೇರುತಿದ್ದಳು. HAL bus stop ನಲ್ಲಿ ಇಳಿಯುತ್ತಿದಳು. ಅಲ್ಲಿವರೆಗೂ ಅವಳನ್ನು ನೋಡುವುದೇ ನನ್ನ ಕೆಲಸ. ಕೆಂಪು ಮೈ ಬಣ್ಣ, ನೀಲಿ ಕಣ್ಣುಗಳು ನೋಡಲು ಶಿಲೆಯಂತೆ ಇದ್ದಳು ಅವಳು. ಅವಳ ಆ ಕಣ್ಣುಗಳಿಗೆ ನಾ ಸೋತಿದ್ದು. ಅಬ್ಬ ಇಂದಿಗೂ ಆ ಕಣ್ಣುಗಳು ನನ್ನ ಕಣ್ಣೆದುರಲ್ಲೇ ಇರುವುದು. ನೋಡಲು ಅವಳು ಅತಿ ಸುಂದರ.
ಕೆಲವು ದಿನಗಳು ಕಳೆದಂತೆ ಆಕೆಯ ನೋಟವು ಸಹ ನನ್ನೆಡೆಗೆ ಬಂದಿತು. ಅಂದಿನಿಂದ ಪರಸ್ಪರ ನೋಟಗಳು. ಅವಳನ್ನು ನೋಡಿ ನಾ smile ಕೊಡುವುದು, ಆಕೆಯು ಸಹ ನನ್ನ ನೋಡಿ ನಾಚಿ smile ಕೊಡುವುದು. ಆಹಾ, ಆ ಕ್ಷಣಗಳು ನೆನೆಯುತಿದ್ದರೆ ಇಂದಿಗೂ ಮೈ ಜುಮ್ಮ್ ಎನ್ನುವುದು. ಇದರಲ್ಲೇ ಇಬ್ಬರಿಗೂ ಸಂತೋಷ. ನಾ ಕಾಣದಿದ್ದರೆ ಆಕೆ ಹುಡುಕುವುದು, ಜನ rush ಆದಾಗ ಒಬ್ಬರನ್ನೊಬ್ಬರು ನೋಡಲು ಹರ ಸಾಹಸ ಮಾಸುವುದು ಮತ್ತೆ ಬಸ್ಸಿನಿಂದ ಇಳಿಯುವಾಗ ಒಂದು ಸಣ್ಣ ನಗೆ ಬೀರಿ bye ಹೇಳುವುದು. ನೆನಪಿಸಿಕೊಂಡರೆ ಮೈ ರೋಮಾಂಚನಗೊಳ್ಳುವುದು.
ಆದರೆ, ಇಬ್ಬರಿಗೂ ಒಬ್ಬರನೊಬ್ಬರು ಮಾತಾಡಿಸುವ ಧೈರ್ಯವಿರಲಿಲ್ಲ. ಹೀಗೆ ಒಂದು ವರ್ಷ ಕಳೆಯಿತು. ನಂತರ ಪರೀಕ್ಷಾ ಸಮಯದ ವೆಳಾಪಟ್ಟಿ ಬದಲಾವಣೆಯಿಂದಾಗಿ ಆ ಬಸ್ಸಿನಲ್ಲಿ ಹೋಗಲು ಆಗುತಿರಲ್ಲಿಲ್ಲ. ಪರೀಕ್ಷೆ ಮುಗಿದಮೇಲೆ ಮತ್ತೆ ಸುಮ್ಮನೆ ಅದೇ ಬಸ್ಸೇರಿ ಅವಳನ್ನು ಹುಡ್ಕಿದೆ. ಆದರೆ ಯಾಕೋ ಮತ್ತೆ ಆ ಬೆಡಗಿ ಕಾಣಲೇ ಇಲ್ಲ.
2nd PUC ಗೆ ನಾ ಮಾವನ ಮನೆಗೆ ಬರಬೇಕಾಯಿತು, ಆದುದರಿಂದ, ನಂತರ ಅವಳನ್ನು ನೋಡಲು ಆಗಲೇ ಇಲ್ಲ. ಕೆಲವು ದಿನಗಳನಂತರ ಅವಳನ್ನು ಅದೇ bus stop ನಲ್ಲಿ ನೋಡಿದ ನೆನಪು......
ಮತ್ತೆ ಎಂದಿಗೂ ಅವಳನ್ನು ನೋಡಲು ಆಗಲಿಲ್ಲ. ಹೆಸರು ಸಹ ಗೊತ್ತಿಲ್ಲ. ಆದರೆ ಆ ದಿನಗಳ ಈ ಸವಿ ನೆನಪು ಎಲ್ಲ ನೆನಪುಗಳಲ್ಲಿ ಅತಿ ಮಧುರವಾದ ನೆನಪು....
ನಿಮಗೂ ನಿಮ್ಮ ಮೊದಲನೇ ಪ್ರೀತಿಯ ಆ ದಿನಗಳು ನೆನಪಿದೆಯಾ...????